ಸೇಡಂ:- ಕಾರ್ಯಕ್ರಮದ ನಿಮಿತ್ತ ಸೇಡಂ ಪಟ್ಟಣಕ್ಕೆ ಆಗಮಿಸಿದ ಸಚಿವ ಹಾಗೂ ಸ್ಥಳೀಯ ಶಾಸಕ ಡಾ. ಶರಣಪ್ರಕಾಶ ಪಾಟೀಲರಿಗೆ ವಾಸವದತ್ತಾ ಕಾರ್ಖಾನೆಗೆ ತೆರಳುವ ಗೂಡ್ಸ್ ವಾಹನ ತಡೆದುಹಾಕಿದೆ.
ಸಚಿವರು ಬರುವ ಮಾಹಿತಿ ಇದ್ದರೂ ಸಹ ರೈಲು ಸಂಚರಿಸಿದ ಪರಿಣಾಮ ಹತ್ತಾರು ನಿಮಿಷಗಳ ಕಾಲ ತಮ್ಮ ಪೊಲೀಸ್ ಬೆಂಗಾವಲು ಜೊತೆಗೆ ಸಚಿವರು ರಸ್ತೆಯ ಮೇಲೆ ಕಾಯಬೇಕಾಯಿತು.
ಅನೇಕ ವರ್ಷಗಳಿಂದ ರೈಲು ಹಳಿಯಿಂದ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದರು. ಈಗ ಸಚಿವರಿಗೆ ಅದರ ಅರಿವಾದಂತಾಗಿದೆ.
ತಮ್ಮ ಇಡೀ ಅಧಿಕಾರಾವಧಿಯಲ್ಲಿ ರೈಲು ಹಳಿಯಿಂದ ಆಗುವ ತೊಂದರೆ ಬಗ್ಗೆ ಎಲ್ಲೂ ಚಕಾರ ಎತ್ತದ ಸಚಿವರು ಈಗಲಾದರೂ ರೈಲು ಸಂಚಾರ ಸಮಯ ಬದಲಾಯಿಸಬೇಕು ಅಥವಾ ರೈಲು ಹಳಿ ಕಿತ್ತೆಸೆಯಬೇಕು ಎಂದು ಸೇಡಮ್ ಜನ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.