ಬಾದಾಮಿ :-ಚೊಳಚಗುಡ್ಡ ಗ್ರಾಮದಲ್ಲಿ ಮಹಾತ್ಮ ಗಾಂಧೀ ಜಯಂತಿ ಅಂಗವಾಗಿ, ಬಾದಾಮಿ ತಾಲೂಕಿನ ಸ್ವಾತಂತ್ರ ಹೋರಾಟಗಾರರ ಗ್ರಾಮ ಚೊಳಚಗುಡ್ಡ ಗ್ರಾಮದ ಯುವಕ ಮಿತ್ರರು ಗುರುಹಿರಿಯರಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಗಾರವನ್ನು ಹಮ್ಮಿಕೊಂಡು ಗ್ರಾಮದಲ್ಲಿ ಪೊರಕೆಗಳನ್ನು ಹಿಡಿದು ಕಸಗುಡಿಸಿ ಸ್ವಚ್ಚಗೊಳಿಸುವ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಚೊಳಚಗುಡ್ಡ ಗ್ರಾಮದ ಬಸ್ ನಿಲ್ದಾಣ ಸೇರಿದಂತೆ ಹಾಲವು ಜಾಗಗಳನ್ನು ಸ್ವಚ್ಛಗೊಳಿಸಿದರು. ಈ ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮದ ಮಾಜಿ ಸೈನಿಕರು ಕೂಡ ಕೈ ಜೋಡಿಸಿ ಸ್ವಚ್ಛ ಭಾರತ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.
ಹಾಗೆಯೇ ಇಂದು ಗ್ರಾಮದ ಸ್ಮಶಾನದ ಜಾಗದಲ್ಲಿಯೂ ಸ್ವಚ್ಛ ಮಾಡಿ ಅಲ್ಲಿ ಗಿಡಗಳನ್ನು ನೆಡುವುದರ ಮೂಲಕ ಗಾಂಧೀ ಜಯಂತಿ ಆಚರಣೆ ಆಚರಿಸಲಾಯಿತು. ಸ್ವಚ್ಛ ಭಾರತ ಅಭಿಯಾನ ಕಾರ್ಯಗಾರದಲ್ಲಿ ಚೊಳಚಗುಡ್ಡ ಗ್ರಾಮದ ಯುವಕ ಮಿತ್ರರು ಗುರು ಹಿರಿಯರು, ಮಾಜಿ ಸೈನಿಕರು ಪಾಲ್ಗೊಂಡಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ