Ad imageAd image

ಗಗನ ಯಾತ್ರಿಗಳಿಗೆ ವಾರ್ಷಿಕ  1.8 ಕೋಟಿಯಿಂದ 1.41 ಕೋಟಿ

Bharath Vaibhav
ಗಗನ ಯಾತ್ರಿಗಳಿಗೆ ವಾರ್ಷಿಕ  1.8 ಕೋಟಿಯಿಂದ 1.41 ಕೋಟಿ
WhatsApp Group Join Now
Telegram Group Join Now

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 287 ದಿನಗಳನ್ನು ಕಳೆದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ನಾಸಾದಿಂದ ಎಷ್ಟು ಸಂಬಳ ಸಿಗುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಸುನೀತಾ ಬಾಹ್ಯಾಕಾಶದಲ್ಲಿದ್ದಾಗ ಪಡೆದ ಸಂಬಳ ಎಷ್ಟು?. ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಅವರಿಗೆ ಎಷ್ಟು ಡಾಲರ್ ನೀಡುತ್ತದೆ?. ಎಂಬುದರ ಬಗ್ಗೆ ತಿಳಿಯೋಣ.

ಈ ಕುರಿತಾಗಿ ನಿವೃತ್ತ ನಾಸಾ ಗಗನಯಾತ್ರಿ ಕ್ಯಾಡಿ ಕೋಲ್ಮನ್ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕೆಲಸ ಮಾಡಿದ ಗಗನಯಾತ್ರಿಗಳಿಗೆ ಯಾವುದೇ ಹೆಚ್ಚುವರಿ ವೇತನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಫೆಡರಲ್ ಉದ್ಯೋಗಿಗಳಾಗಿರುವುದರಿಂದ, ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆಯುವ ಸಮಯವನ್ನು ಭೂಮಿಗೆ ಸಾಮಾನ್ಯ ಭೇಟಿ ಎಂದೇ ಪರಿಗಣಿಸಲಾಗುತ್ತದೆ ಎಂದರು.

ಸಾಮಾನ್ಯ ವೇತನದ ಜೊತೆಗೆ, ISSನಲ್ಲಿ ಆಹಾರ ಮತ್ತು ವಸತಿ ವೆಚ್ಚವನ್ನು NASA ಭರಿಸಲಿದೆ. ಅಂತಹ ಅನಿರೀಕ್ಷಿತ ಬೆಳವಣಿಗೆಗಳ ಸಂದರ್ಭದಲ್ಲಿ ದಿನಕ್ಕೆ ಹೆಚ್ಚುವರಿಯಾಗಿ ನಾಲ್ಕು ಡಾಲರ್‌ಗಳು ಅಥವಾ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 348 ರೂಪಾಯಿಗಳು ಮಾತ್ರ ಸಿಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.

ಅಮೆರಿಕ ಸರ್ಕಾರದ ವೇತನ ಶ್ರೇಣಿಯ ಪ್ರಕಾರ, ನಾಸಾ ಗಗನಯಾತ್ರಿಗಳಿಗೆ ಅನುಭವ ಮತ್ತು ಶ್ರೇಣಿಯ ಆಧಾರದ ಮೇಲೆ ವೇತನ ನೀಡಲಾಗುತ್ತದೆ. ಇದು GS-13ರಿಂದ GS-15ರವರೆಗೆ ಇರುತ್ತದೆ. ಅದರಂತೆ ಅವರ ವಾರ್ಷಿಕ ವೇತನ $1,25,133 ರಿಂದ $1,62,672 ವರೆಗೆ ಇರುತ್ತದೆ. ಭಾರತೀಯ ಕರೆನ್ಸಿಯಲ್ಲಿ ಇದು ಸರಿಸುಮಾರು 1.8 ಕೋಟಿಯಿಂದ 1.41 ಕೋಟಿ ರೂ.ಗಳಷ್ಟಿದೆ. ನಾಸಾ ಹೆಚ್ಚುವರಿಯಾಗಿ $1100 ಪಾವತಿಸುತ್ತದೆ.

ಅನುಭವಿ ಗಗನಯಾತ್ರಿಯಾಗಿರುವ ಸುನೀತಾ ವಿಲಿಯಮ್ಸ್ GS-15 ವರ್ಗದ ಅಡಿಯಲ್ಲಿ ಬರುತ್ತಾರೆ. ಇದು ಅಂದಾಜು ವಾರ್ಷಿಕ 152,258 (1.31 ಕೋಟಿ ರೂ) ಡಾಲರ್​ ವೇತನ ಹೊಂದಿದೆ. ಸಂಬಳದ ಹೊರತಾಗಿ ನಾಸಾ ಗಗನಯಾತ್ರಿಗಳು ಆರೋಗ್ಯ ವಿಮೆ, ಮುಂದುವರಿದ ಮಿಷನ್ ತರಬೇತಿ, ಮಾನಸಿಕ ಬೆಂಬಲ ಮತ್ತು ಪ್ರಯಾಣ ಭತ್ಯೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ ನಾಸಾ ಗಗನಯಾತ್ರಿಗಳಿಗೆ ಹೆಚ್ಚುವರಿ ಸಮಯವನ್ನೂ ನೀಡುತ್ತದೆ.

WhatsApp Group Join Now
Telegram Group Join Now
Share This Article
error: Content is protected !!