Join The Telegram | Join The WhatsApp |
ಮುದಗಲ್ಲ : ತಿಂಥಣಿ ಬ್ರಿಡ್ಜ್‌ನಲ್ಲಿರುವ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಸಿದ್ಧರಾಮನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಜ. 12ರಿಂದ 14ರವರೆಗೆ ‘ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮ ನಡೆಯಲಿದೆ’
ಜ. 12ರಂದು ‘ಹಾಲುಮತ ಕಲಾವಿದರ ಮತ್ತು ಕಲಾಪ್ರಕಾರಗಳ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ..
ಜ. 13ರಂದು ಬೆಳಿಗ್ಗೆ ‘ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ’ ಮಧ್ಯಾಹ್ನ ‘ಹಾಲುಮತ ಧರ್ಮ ವೈಶಿಷ್ಟ್ಯ ಹಾಗೂ ರಾಜ್ಯ ಯುವ ಕುರುಬ ಸಂಘದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ’ವನ್ನು ಕೇಂದ್ರ ಸಚಿವ ಭಗವಂತ್ ಖೂಬಾ ಉದ್ಘಾಟನೆ ಮಾಡಲಿದ್ದಾರೆ. ಜ. 14ರಂದು ಪ್ರಶಸ್ತಿ ಪ್ರದಾನ ಮತ್ತು ಸಿದ್ಧರಾಮೇಶ್ವರ ಜಯಂತಿ’ಯನ್ನು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಉದ್ಘಾಟನೆ ಮಾಡಲಿದ್ದಾರೆ’ ಎಂದು ತಿಂಥಣಿ ಬ್ರಿಡ್ಜ್ ಮಠದಿಂದ ಶಾಖಮಠದ ಗುರುಗಳಾದ ಶ್ರೀ ಶಿವ ಸಿದ್ದಯ್ಯ ಸ್ವಾಮೀಜಿ ಬಾದಿಗಿನಾಳ ಮಠದ ಗುರುಗಳು ಮುದಗಲ್ಲ ಭಾಗದ ಜನತೆಗೆ ಹಾಗೂ ಕನ್ನಾಪೂರಹಟ್ಟಿ
ಮಾಹಿತಿ ನೀಡಿದರು ಹಾಗೂ ಈ ಸಂದರ್ಭದಲ್ಲಿ ಊರಿನ ಹಿರಿಯ ರಿಗೆ ಹಾಲುಮತ ಸಂಸ್ಕೃತಿ ವೈಭವ ಕರಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಣ್ಣ ಸಿದ್ದಯ್ಯಮೇಗಳಪೇಟೆ,ಪರಮೇಶ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ತಾಲೂಕು ಅಧ್ಯಕ್ಷ, ,ಶಿವಕುಮಾರ್SDMC ಅಧ್ಯಕ್ಷರು,ಚನ್ನಬಸಪ್ಪ ಎನ್ ತುಂಬಲಗಡಿ ಕ್ರಾಂತಿ ವೀರ ಸಂಘ ಅಧ್ಯಕ್ಷರು ಮುದಗಲ್ ,ಹಿರಿಯಾದ ಪರಮಣ್ಣ ,ಅಮರಪ್ಪ ಗೋರ್ ಇತರರು ಉಪಸ್ಥಿತರಿದ್ದರು…
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |