ಮೊಳಕಾಲ್ಮುರು:- ಕೇಂದ್ರ ಸರ್ಕಾರದ ವಿಶೇಷ ಆಡಿಫ್ ಯೋಜನೆಯಡಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಚಿತ್ರದುರ್ಗ ಇವರ ವತಿಯಿಂದ ಉಚಿತವಾಗಿ ವಿವಿಧ ಸಾಧನಾ ಸಲಕರಣೆಗಳನ್ನು ವಿತರಣೆ ಮಾಡಿದರು ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ವಾಹನಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಮಾತನಾಡಿ ಸರ್ಕಾರದ ವತಿಯಿಂದ ಉಚಿತವಾಗಿ ವೀಲ್ ಚೇರ್, ವಾಕಿಂಗ್ ಸ್ಟಿಕ್, ಶ್ರವಣ ಸಾಧನ, ಇನ್ನು ವಿಧ ಸಲಕರಣೆಗಳು ಉಚಿತವಾಗಿ ನೀಡುತ್ತಾರೆ ಇದರ ಉಪಯೋಗವನ್ನು ಸಂಬಂಧಪಟ್ಟವರೇ ತೆಗೆದುಕೊಳ್ಳಬೇಕು. ಇದರಿಂದ ಅನೇಕ ಜನರಿಗೆ ಅನುಕೂಲವಾಗುತ್ತದೆ ಎಂದರು..
ಸರ್ಕಾರದಿಂದ ಅನೇಕ ಉಚಿತ ಯೋಜನೆಗಳನ್ನು ನೀಡುತ್ತಿದೆ ಇದನ್ನು ಸದುಪಯೋಗ ಪಡೆದುಕೊಂಡು ಒಳ್ಳೆಯ ಜೀವನ ನಡೆಸಬೇಕು ಎಂದರು..
ಈ ಸಂದರ್ಭದಲ್ಲಿ ಇ ಓ ಪ್ರಕಾಶ್ ಸಿಡಿಪಿಓ ನವೀನ್ ಕುಮಾರ್ ಡಾ ರಂಗಪ್ಪ, ಬೆಸ್ಕಾಂ ಶಿವಪ್ರಸಾದ್ ಮುಖಂಡರಾದ ಬಾಲರಾಜ್ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ಲಾ ಖಾದರ್ ಮುಖಂಡರಾದ ಓಬಣ್ಣ ಪಿ ಗೋಪಾಲ್ ಶಿವಲಿಂಗಪ್ಪ ಹೆಜ್ಜೇನಳ್ಳಿ ನಾಗರಾಜ ಸಿರಿಸ್ದಾರ್ ಏಳು ಕೋಟಿ ಇನ್ನೂ ಹಲವರು ಉಪಸ್ಥಿತರಿದ್ದರು..
ವರದಿ :-ಪಿಎಂ ಗಂಗಾಧರ್