ಬೆಂಗಳೂರು: ಕರ್ನಾಟಕದಲ್ಲಿ ಒಂದೂವರೆ ವರ್ಷದಲ್ಲಿ 1,219 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರ ಬಿದಿದ್ದೆ.
ರಾಜ್ಯದಲ್ಲಿ ಮಳೆ ಕೊರತೆ ಬೆಳೆ ಹಾನಿ, ಸಾಲದ ಹೊರೆ ರೈತರನ್ನು ಕಂಗಾಲು ಮಾಡಿದ್ದು, ಅನ್ನದಾತನು ಆತ್ಮಹತ್ಯೆ ದಾರಿ ಹಿಡಿದಿರುವುದು ಚಿಂತೆಗೆ ಈಡು ಮಾಡಿದೆ.
ಈ ನಡುವೆ ಹಾವೇರಿ,ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ರೈತರ ಸಾವನ್ನಪ್ಪಿದ್ದಾರಂತೆ. ಸರ್ಕಾರದ ಅಂಕಿ – ಅಂಶಗಳ ಪ್ರಕಾರ 2022-23 ನೇ ಸಾಲಿನಲ್ಲಿ ( 1-4-2022 ರಿಂದ 31-3-2023) ವರೆಗೆ ಒಟ್ಟು 968 ರೈತರು ಸಾವನ್ನಪ್ಪಿದ್ದರೆ. ಈ ಪೈಕಿ 849 ಪ್ರಕರಣಗಳನ್ನು ಮಾತ್ರ ಸಂಬಂಧಪಟ್ಟ ಇಲಾಖೆ ಗಣನೆಗೆ ತೆಗೆದುಕೊಂಡಿದ್ದು ಪರಿಹಾರವನ್ನು ಕೂಡ ವಿತರಣೆ ಮಾಡಿದ್ದು , 111 ಅರ್ಜಿಗಳನ್ನು ತಿರಸ್ಕಾರ ಮಾಡಿದೆ.
2022-23 ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 43, ಧಾರವಾಡದಲ್ಲಿ 78, ಹಾವೇರಿಯಲ್ಲಿ 122, ಬೆಳಗಾವಿ -81, ಬೀದರ್- 36, ಚಿಕ್ಕಮಗಳೂರು- 53, ಕಲಬುರಗಿ- 50, ಮೈಸೂರು- 83, ಯಾದಗಿರಿ- 56 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ದಾಖಲಾಗಿದ್ದಾವೆ.
ಅಂದ ಹಾಗೇ ಕೆಲ ದಿನಗಳ ಹಿಂದೆ ಕಬ್ಬು ಅಭಿವೃದ್ಧಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಸಚಿವ ಶಿವಾನಂದ ಪಾಟೀಲ್ ಅವರು, ಮೃತರ ಕುಟುಂಬಗಳಿಗೆ ನೀಡಲಾಗುವ ಪರಿಹಾರವನ್ನು ಸರ್ಕಾರ 5 ಲಕ್ಷ ರೂ.ಗೆ ಹೆಚ್ಚಿಸಿದ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.