Ad imageAd image
- Advertisement -  - Advertisement -  - Advertisement - 

ಪುರಸಭೆ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ 140 ನೇ ಜಯಂತಿ ಆಚರಣೆ..

Bharath Vaibhav
ಪುರಸಭೆ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ 140 ನೇ ಜಯಂತಿ ಆಚರಣೆ..
WhatsApp Group Join Now
Telegram Group Join Now

ಮುದಗಲ್ಲ :- ಪಟ್ಟಣದ ಪುರಸಭೆ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ 140 ನೇ ಜಯಂತಿ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು

ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ
ನಾಲ್ವಡಿ ರವರು ಅಪರೂಪದ ಮಹಾರಾಜರು. ಇಡೀ ಜಗತ್ತೇ ಮೈಸೂರು ಕಡೆಗೆ ಮುಖ ಮಾಡುವಂತೆ ಮಾಡಿದ ಮಹಾರಾಜರು. ತಮ್ಮ ಅಧಿಕಾರದ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿ. ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ,ನೀರಾವರಿ, ವಿಜ್ಞಾನ, ಕೈಗಾರಿಕೆ ,ಮಹಿಳಾ ಶಿಕ್ಷಣ, ಹಿಂದುಳಿದ ಹಾಗೂ ಬಡ ಜನರ ಬಗ್ಗೆ ಸಂವೇದನಾಶೀಲರಾಗಿ ಚಿಂತಿಸಿ ಪ್ರಗತಿಪರ ನಿರ್ಧಾರಗಳನ್ನು ಕೈಕೊಂಡು ಇತಿಹಾಸದಲ್ಲಿ ಮರೆಯಲಾಗದ ಮಹಾ ರಾಜರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ :- ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ,ಕಂದಾಯ ವಿಭಾಗದ ಅಧಿಕಾರಿ ದೇವರಾಜ, ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ , ನಿಸಾರ್ ಅಹಮದ್, ಜಿಲಾನಿ ಪಾಶ,ಪವನ್ ಕುಮಾರ್,ಬಸವರಾಜ ,ಕೃಷ್ಣ ಚಲುವಾದಿ, ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!