ಐನಾಪುರ:- ಸಂಘವು 118ಸುಮಾರು ವರ್ಷದಿಂದ ಉತ್ತಮವಾಗಿ ಬೆಳೆದುಕೊಂಡು ಬಂದಿದೆ .ಇಲ್ಲಿ ಯಾವುದೇ ಪಕ್ಷ ಭೇದ ಮಾಡದೆ ಮಂಡಳದ ಸಂಘದ ಸದಸ್ಯರು ನಿಸ್ವಾರ್ಥ ದಿಂದ ಸಂಘವನ್ನು ನಡೆಸಿಕೊಂಡು ಬಂದಿರುತ್ತಾರೆ. ತಾವು ಕೂಡ ಸಂಘವನ್ನು ಇನ್ನಷ್ಟು ಚೆನ್ನಾಗಿ ಬೆಳೆಸುತ್ತೇವೆ ಎಂದ ಅವರು .ಸಹಕಾರಿ ಸಂಘಗಳು ರೈತರಿಗೆ ವರದಾನವಾಗಿವೆ ಎಂದು ಸಂಸ್ಥೆಯ ಅಧ್ಯಕ್ಷ ತಮ್ಮಣ್ಣಾ ಪಾರಶೇಟ್ಟಿಹೇಳಿದರು. ಅವರು ರವಿವಾರ ಸಂಸ್ಥೆಯ ಸಭಾಭವನದಲ್ಲಿ ಏರ್ಪಡಿಸಿದ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ1 18 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ
ನಮ್ಮ ಸಹಕಾರಿ ಸಂಘವು
ರೈತರಿಗೆ ಹೆಚ್ಚಿನ ಪ್ರೊತ್ಸಾಹ ಕೊಡುತ್ತಿದ್ದು ರೈತರು ತಮ್ಮ ಕಬ್ಬಿನ ಬಿಲ್ ನಮ್ಮ ಸೊಸೈಟಿ ಯಿಂದ ತರಿಸಿಕೊಂಡರೆ ಸಂಘಕ್ಕೆ ಲಾಭವಾಗುತ್ತದೆ .
ಗ್ರಾಮದಲ್ಲಿ ಹಲವಾರು ಸಹಕಾರಿ ಸಂಘಗಳು ಕಾಲಿಟ್ಟಿದ್ದು,ಡಿಪಾಜಿಟ್,ಲೋನ್,ನಮ್ಮ ಗ್ರಾಮದಿಂದ ಪಡೆದು ಲಾಭಾಂಶ ಪಡೆದುಕೊಳ್ಳುತ್ತಿದ್ದು
ಆದರಿಂದ, ಗ್ರಾಮದಲ್ಲಿರುವ ವಿವಿದ್ದೋಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಗ್ರಾಮಸ್ಥರು ಹಣವನ್ನು ಡಿಪಾಜಿಟ್ ಮಾಡಿ ಹೆಚ್ಚಿನ ಲಾಭಾಂಶ ಪಡೆದುಕೊಳಿ ಎಂದರು.
ಸದ್ಯದಲ್ಲಿಯೇ ಜೇನರಿಕ ಮೆಡಿಕಲ್ ತಂಗಡಿ ಬಳಿ ಪೆಟ್ರೋಲ್ ಪಂಪ್ ಮಂಜೂರಾಗಿದ್ದು. ಅದರ ಲಾಭವನ್ನು ರೈತರು ಪಡೆದುಕೊಳಬೇಕೆಂದರು, ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಪಡಿತರ ಧಾನ್ಯ ವಿತರಣೆ ಕೌಂಟರ ವವ್ಯಸ್ಥೆ ,ಇಂಟರ್ನೆಟ್ ಬಿಲ್,ಡಿವ್ಹಂಡ್ ಶುಧ್ದಕುಡಿಯುವನೀರಿನ ಬೆಲೆ ಹೆಚ್ಚಳ,ಮಾಡಿರುವ ಕುರಿತು ಅವುಗಳನ್ನು ಬರುವ ದಿನಮಾನಗಳಲ್ಲಿ ಸಭೆಯಲಿ ಚರ್ಚಿಸಿ ಮಾಡುವುದಾಗಿ ಭರವಸೆ ನೀಡಿದರು.
.ಸಹಕಾರಿ ಸಂಘಗಳು ರೈತರ ಕೃಷಿ ಅಭಿವೃದ್ದಿಗೆ ಪೂರಕವಾಗಿದೆ ಆದ್ದರಿಂದ ರೈತರು ಸಂಘದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಬೇಕು ಜೊತೆಗೆ ಪಡೆದಂಥ ಸಾಲವನ್ನು ಸಕಾಲಕ್ಕೆ ತುಂಬಿ ಪರಸ್ಪರ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.
118ವರ್ಷ ಇತಿಹಾಸ ಹೊಂದಿರುವಈ ಸಂಘವು ಈವರ್ಷ 59,15,984ರೂ ಗಳ ನಿವ್ವಳ ಲಾಭ ಶೇರ ಬಂಡವಾಳ 2128213,ಲಾಭ 5915984,ಸಾಲಕೊಟ್ಟಿದ್ದು 201447667 ದುಡಿಯುವ ಬಂಡವಾಳ 384229968ಗಳಿಸಿದೆಡಿವ್ಹಿಂಡ 10 ಹಂಚಿದಯ ಇ ವರ್ಷವು ಕೂಡ ಹೆಚ್ಚಿನ ಸಾಲ ಸೌಲಭ್ಯರೈತರಿಗೆ ಒದಗಿಸಿ ಹಚ್ಚಿನ ಲಾಭಾಂಶ ಗಳಿಸಿ ಸದಸ್ಯರಿಗೆ ಹೆಚ್ಚಿನ ಡಿವ್ಹಿಂಡ ನೀಡಲಾಗುವುದು ಮುಂಬರುವ ದಿನಗಳಲ್ಲಿ ಸಂಘದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಣ್ಣಾಸಾಬ ಜಾಧವ ಸಂಘದ ವಾರ್ಷಿಕ ವರದಿ ಮಂಡಿಸಿ ಸಂಘದಿಂದ ಸಿಗುವ ಅನೇಕ ಸೌಲಭ್ಯಗಳ ಕುರಿತು ವಿವರಿಸಿದರು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಪ್ಪಾಸಾಬ ಪಾಟೀಲ ನಿರ್ದೇಶಕರಾದ ರಾಜೇಂದ್ರ ಪೋತದಾರ,,ಅಣ್ಣಾಸಾಬ ಡೂಗನವರ,ಪ್ರವೀಣ ಕುಲ್ಲಕರ್ಣಿ,ರಾಕೇಶ ಕಾರ್ಚಿ,ಅಣೇಶ ಅಪರಾಜ,ಅಡಿವೇಪ್ಪ ಮಾದರ,ಸದಾಶಿವ ಕೇರಿಕಾಯಿ, ಕುಮಾರ ಅಪರಾಜ ,ಲಕ್ಷ್ಮೀಬಾಯಿ ರಡ್ಡಿ, , ವರ್ಷಾ ಪಾಟೀಲ,, ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಕೌಂಟೆಂಟ್ ಮೃತ್ಯುಂಜಯ ಹಿರೇಮಠ ಸ್ವಾಗತಿಸಿ ವಂದಿಸಿದರು.
ವರದಿ: ಮುರಗೇಶ ಗಸ್ತಿ