Join The Telegram | Join The WhatsApp |
ಇಂಡಿ: ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ 51 ನೆಯ ಜನ್ಮದಿನಾಚರಣೆಯನ್ನು ಶ್ರೀಶಾಂತೇಶ್ವರ ಗಜಾನನ ಯುವಕ ಮಂಡಳಿಯ ಸದಸ್ಯರು ಶ್ರೀ ಶಾಂತೇಶ್ವರ ದೇವಾಲಯ ಆವರಣದಲ್ಲಿ ಆಚರಿಸಿದರು.ನಂತರ ಶ್ರೀ ಶೈಲಗೌಡ ಪಾಟೀಲ,ಪ್ರಭುಗೌಡ ಪಾಟೀಲ, ಅಯೂಬ್ ನಾಟೀಕರ ಮಾತನಾಡಿ ಶುಭಕೋರಿದರು.ಸನ್ಮಾನ ಸ್ವೀಕರಿಸಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ನನ್ನಂತಹ ಬಡ ವ್ಯಕ್ತಿಯ ಜನ್ಮ ದಿನಾಚರಣೆಯನ್ನು ಅಭಿಮಾನ ಪೂರ್ವಕವಾಗಿ ಮಾಡಿದ್ದು ಸಂತೋಷವಾಗಿದೆ, ತಾವುಗಳು ನನ್ನ ಮೇಲೆ ಇಟ್ಟುಕೊಂಡ ನಂಬಿಕೆ ವಿಶ್ವಾಸಕ್ಕೆ ನಾನು ಜೀವನ ಪೂರ್ತಿ ತಮ್ಮ ಸೇವಕನಾಗಿ ಕೆಲಸ ನಿರ್ವಹಣೆ ಮಾಡುತ್ತೇನೆ ಎಂದು ಮಾತನಾಡಿದರು.
ವೇದಿಕೆ ಮೇಲೆ ಸಾನಿಧ್ಯವನ್ನು ವೇ ರವಿಕುಮಾರ್ ಹಿರೇಮಠ, ಹಿರಿಯ ನಾಯಕರು ಸಾತುಮಾಮಾ ತೆನ್ನಿಹಳ್ಳಿ,ಮುನ್ನಾ ಹಿಳ್ಳಿ, ಸಿದ್ದು ಡಂಗಾ ಮಹೇಶ ಹದಗಲ್ಲ, ಸುಭಾಸ್ ಬಳಮಕರ, ಮಲ್ಲಿಕಾರ್ಜುನ ದೇವರ, ಸಚಿನ್ ಕಂಬಾರ,ಶಾಂತಯ್ಯ ಪತ್ರಿಮಠ,ಮಂಜು ಬಡಿಗೇರ, ಮಲ್ಲಿಕಾರ್ಜುನ ಕುಡಿಗನೂರ, ಇಸಾಕ್ ಸೌದಾಗರ, ಹುಸೇನಿ ಭಜಂತ್ರಿ,ಈರಣ್ಣ ತೇನ್ನಿಹಳ್ಳಿ,ದೂಳಪ್ಪ ತೆನ್ನಿಹಳ್ಳಿ,ನಾಗು ದೇವರ, ಪ್ರಮೋದ್ ಹೂಗಾರ, ಮಹಾಂತೇಶ ಪಾಟೀಲ,ಕೇಶವ ಕಾಟಕರ, ಮುಂತಾದ ನಾಯಕರು ಉಪಸ್ಥಿತರಿದ್ದರು.
ವರದಿ.ತುಕಾರಾಮ ಪವಾರ
Join The Telegram | Join The WhatsApp |