ನಿಪ್ಪಾಣಿ : –ಮಹಾರಾಷ್ಟ್ರದ ಹುಪ್ಪರಿಯ ಜವಾಹರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ 2 ಟ್ರ್ಯಾಕ್ಟರಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯು ನಿನ್ನೆ ರಾತ್ರಿ ಸಮಯದಲ್ಲಿ ನಡೆದಿದೆ.ಮಹಾರಾಷ್ಟ್ರದ ಹುಪ್ಪರಿ ಜವಾಹರ ಸಕ್ಕರೆಗೆ ಸಾಗಿಸುತ್ತಿದ್ದ ಕಬ್ಬು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಮಾಜಿ ಸಂವಸದ ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ರೈತ ಸಂಘಟನೆಯಿಂದ ಪ್ರಸ್ತಕ ವರ್ಷದ ಕಬ್ಬಿಗೆ 3500 ರೂಪಾಯಿ ದರ ಹಾಗೂ ಕಳೆದ ವರ್ಷ ಹೋದ ಕಬ್ಬಿಗೆ ಹೆಚ್ಚುವರಿಯಾಗಿ ಟನಗೆ 400 ರೂಪಾಯಿ ದರ ನೀಡಬೇಕು ಇಲ್ಲವಾದ್ರೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸಬಾರದೆಂದು ಪ್ರತಿಭಟನೆಗಳು ನಡೆಯುತ್ತಿದೆ.
ಈ ನಡುವೆ ಕರ್ನಾಟಕದಿಂದ ಮಹಾರಾಷ್ಟ್ರ ಜವಾಹಲರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ 2 ಟ್ರ್ಯಾಕ್ಟರಗೆ ಕಾರದಗಾ-ರೇಂದಾಳ ರಸ್ತೆಯ ಮಧ್ಯೆ ಕಬ್ಬು ತುಂಬಿದ ಟ್ರ್ಯಾಕ್ಟರಗೆ ಬೆಂಕಿ ಹಚ್ಚಲಾಗಿದೆ.
ಟ್ರ್ಯಾಕ್ಟರ ಮಾಲೀಕ ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ವರದಿ :-ರಾಜು ಮುಂಡೆ