This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಶ್ರೀ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು

Join The Telegram Join The WhatsApp

ಶ್ರೀ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ಎಮ್ ಎ ಘಂಟಿಮಠ ಇವರ ಸಹಕಾರದಿಂದ “ಮಾರುತಿ ಮೆಡಿಕಲ್ಸ್ ಬೆಂಗಳೂರ್” ಇವರು ನೀಡಿರುವ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿದ ಶಿಕ್ಷಣ ಸಂಯೋಜಕರಾದ ಶ್ರೀ ಹಣಮಂತ ರಾಜು ಅವರು ಶಿಕ್ಷಣದ ಜೊತೆಗೆ ಪಠ್ಯತರ ಚಟುವಟಿಕೆ ಗಳಲ್ಲಿ ಮಕ್ಕಳು ಭಾಗವಹಿಸಿ, ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಶಿಕ್ಷಕರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಸಹಾಯ ಮಾಡಬೇಕೆಂಬ ಎಂದೂ ಹೇಳಿದರು.
ನಂದಿಕೇಶ್ವರ ಸಿ ಆರ್ ಸಿಯ ಸಿ ಆರ್ ಪಿ ಗಳಾದ ಶ್ರೀ ಟಿ ಕೆ ಹೀರೆಮಠ ಅವರು ಮಾತನಾಡಿ ಸಮಾಜದಲ್ಲಿ ದಾನಿಗಳ ನೆರವಿನಿಂದ ಶಾಲೆಯ ಅಭಿವೃದ್ಧಿಗೆ ಒತ್ತು ಕೊಡಬೇಕು, ಮಕ್ಕಳ ಶಿಕ್ಷಣ ಮಟ್ಟ ಸುಧಾರಣೆ ಆಗಬೇಕೆಂದು ಹೇಳಿದರು,
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ಸಿದ್ದು ಮುಚಖಂಡಿ ಅವರು ಮಾತನಾಡಿ ಕ್ಯಾಲೆಂಡರ್ ನಲ್ಲಿ ನಮ್ಮ ದೇಶ,ನಾಡು, ನುಡಿ, ರಾಜಮನೆತನಗಳನ್ನು ಚಿತ್ರಿಸಿ ವಿವರಿಸಿದ್ದು ಸುಂದರವಾಗಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಶ್ರೀ ಜಿ ಎಸ್ ಹಾದಿಮನಿ , ಶಿಕ್ಷಕರಾದ ಡಿ ಬಿ ಚರೋಡಿ, ಕೆ ಪೀ ಮೊಕಾಶಿ, ಶಿಕ್ಷಕಿಯರಾದ ವಾಯ್ ಜಿ ನಾಯಕ್, ಎಸ್ ಎಮ್ ಜನಾಲಿ, ಬಿ ಡಿ ಮೋಟಿಮಠ , ಕುಂಬಾರ, ಭಾಗವಹಿಸಿದ್ದರು
ಶಿಕ್ಷಕರಾದ ಎಸ್ ಬಿ ಪವಾಡಶೆಟ್ಟಿ ಅವರು ನಿರೂಪಿಸಿದರು, ಶ್ರೀ ಎಮ್ ಎಮ್ ಸಜ್ಜನ ಸ್ವಾಗತಿಸಿದರು

ವರದಿ. ಕೆ. ಎಚ್.ಶಾಂತಗೇರಿ


Join The Telegram Join The WhatsApp
Bharath Vaibhav
the authorBharath Vaibhav

Leave a Reply