Ad imageAd image

ಬರೋಬ್ಬರಿ 21,980 ಪಡಿತರ ಕಾರ್ಡ್ ಗಳು ರದ್ದು

Bharath Vaibhav
ಬರೋಬ್ಬರಿ 21,980 ಪಡಿತರ ಕಾರ್ಡ್ ಗಳು ರದ್ದು
RATION CARD
WhatsApp Group Join Now
Telegram Group Join Now

ಬೆಂಗಳೂರು : ನಕಲಿ ದಾಖಲೆ ನೀಡಿ ಪಡಿತರ ಚೀಟಿ ಪಡೆದುಕೊಂಡ ಅನರ್ಹರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಬರೋಬ್ಬರಿ 21,980 ಪಡಿತರ ಕಾರ್ಡ್ ಗಳನ್ನು ರದ್ದು ಪಡಿಸಿದೆ.

ಆದಾಯ ತೆರಿಗೆ ಕಟ್ಟುವ ಹಾಗೂ ಸರ್ಕಾರಿ ನೌಕರಿ ಹೊಂದಿರುವ ಕುಟುಂಬದವರು ಬಿಪಿಎಲ್‌ ಕಾರ್ಡನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವ ಕಾರ್ಡಗಳನ್ನು ಪತ್ತೆ ಹಚ್ಚುವ ಮೂಲಕ ಆಹಾರ ಇಲಾಖೆ 2024-20250 21.980 ಪಡಿತರ ಚೀಟಿಗಳನ್ನು ರದ್ದುಪಡಿಸಿದೆ.

ಬೆಳಗಾವಿಯಲ್ಲಿ 1482, ಬೀದರ 814, ಹಾಸನ 1030, ಬಾಗಲಕೋಟೆಯಲ್ಲಿ 995, ಬಳ್ಳಾರಿಯಲ್ಲಿ 256, ಬೆಂಗಳೂರು ಈಸ್ಟ್ 531, ಹಾವೇರಿ 333, ಕಲಬುರಗಿ 1497, ಮೈಸೂರು 2441, ತುಮಕೂರು 1044, ಕೊಪ್ಪಳ 506, ಮಂಡ್ಯ 1168, ವಿಜಯನಗರ 204, ವಿಜಯಪುರ 654, ಯಾದಗಿರಿ 139 ಸೇರಿದಂತೆ ಒಟ್ಟು 35 ಜಿಲ್ಲೆಗಳಲ್ಲಿ 21,980 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.

ಇನ್ನು ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಹೆಸರು ಸೇರ್ಪಡೆ/ತಿದ್ದುಪಡಿಗೆ ಮಾರ್ಚ್ 31 ರವರೆಗೆ ಅವಕಾಶ ನೀಡಲಾಗಿದೆ.

ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ,ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಮಾರ್ಚ್ 31 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶವಿದೆ.

ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ವೆಬ್ ಸೈಟ್ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು.

ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು. http://ahara.kar.nic.in ವೆಬ್ಟ್ ಗಮನಿಸಬಹುದಾಗಿದೆ.

WhatsApp Group Join Now
Telegram Group Join Now
Share This Article
error: Content is protected !!