ಸಿರುಗುಪ್ಪ :- ನಗರದ ಸದಾಶಿವನಗರದಿಂದ ಡ್ರೈವರ್ ಕಾಲೋನಿಗೆ ಹೋಗುವ ರಸ್ತೆಯಲ್ಲಿರುವ ಶ್ರೀ ಶಿವಶರಣೆ ಕೊರವಮ್ಮ ದೇವಿಯ 21ನೇ ವಾರ್ಷಿಕ ಆರಾಧನಾ ಮಹೋತ್ಸವ ನಿಮಿತ್ತ ಗಂಗೆಪೂಜೆ ಹಾಗೂ ಗೋಪುರದ ಕಳಸಾರೋಹಣ ಹಾಗೂ ಭಕ್ತಾದಿಗಳಿಗೆ ಶನಿವಾರ ದಾಸೋಹ ಕಾರ್ಯಕ್ರಮ ನಡೆಯಿತು.
ಪ್ರತಿವರ್ಷದಂತೆ ನಡೆಯುವ ಶ್ರೀದೇವಿಯ ಗಂಗೆ ಪೂಜೆ ನಿಮಿತ್ತ ಸುಮಂಗಲೆಯರಿAದ ಕಳಸ ಮತ್ತು ತನುಬಿಂದಿಗೆಯನ್ನು ತುಂಗಾಭದ್ರ ನದಿಯಿಂದ ದೇವಸ್ಥಾನಕ್ಕೆ ಹೊತ್ತು ತರಲಾಯಿತು.
ಪೂಜೆ ನಿಮಿತ್ತ ದೇವಸ್ಥಾನದಲ್ಲಿ ಹೋಮ ಹವನ, ವಿವಿಧ ಫಲಪುಷ್ಪಗಳ, ವೀಳ್ಯದೆಲೆಗಳ ವಿಶೇಷ ಅಲಂಕಾರ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ಗೋಪುರಕ್ಕೆ ಕಳಸಾರೋಹಣದಂತಹ ಕಾರ್ಯಕ್ರಮಗಳು ಜರುಗಿದವು.
ಭಕ್ತಾದಿಗಳು ಕಾಯಿ ಕರ್ಪೂರ, ಎಡೆ ನೈವೇದ್ಯವನ್ನು ಭಕ್ತಿಯಿಂದ ಸರ್ಮಪಿಸಿ ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.
ಇದೇ ವೇಳೆ ಸ್ಥಳೀಯರಾದ ರಾಜಶೇಖರಯ್ಯಸ್ವಾಮಿ, ಬಸವರಾಜಸ್ವಾಮಿ, ರಾಮಲಿಂಗಯ್ಯಸ್ವಾಮಿ, ರಾಜಶೇಖರರೆಡ್ಡಿ, ನರಸಿಂಹರೆಡ್ಡಿ, ಬಾಸ್ಕರರೆಡ್ಡಿ, ಮಂಡಾಳ್ ಬಟ್ಟಿ ಸತ್ಯಪ್ಪ, ಇನ್ನಿತರರು ಇದ್ದರು.
ವರದಿ .ಶ್ರೀನಿವಾಸ ನಾಯ್ಕ