ನಿಪ್ಪಾಣಿ: ತಾಲೂಕಿನ ಪ್ರತಿ ಹಳ್ಳಿಗಳಿಂದ 2200 ಮಾಲಾಧಾರಿಗಳು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಹನುಮನ ದರ್ಶನಕ್ಕೆ ಗುರುವಾರ ಪ್ರಯಾಣ ಬೆಳೆಸಿ ಶನಿವಾರ ಮದ್ಯ ರಾತ್ರಿ ಸ್ವಗ್ರಹಕ್ಕೆ ಆಗಮಿಸಿದ್ದಾರೆ. ಗುರುವಾರ ಬೆಳಿಗ್ಗೆ ನಿಪ್ಪಾಣಿಯ ಮುನ್ಸಿಪಲ್ ಹಾಲಿನಲ್ಲಿ ಜಮಾಯಿಸಿದ ಭಕ್ತರು ಅಲ್ಲಿಂದ ಪಟ್ಟಣದ ಮುಖ್ಯ ರಸ್ತೆಗಳಿಂದ ಮೆರವಣಿಗೆಯ ಮೂಲಕ ತೆರಳಿ “ಜೈ ಶ್ರೀರಾಮ, ಪವನಪುತ್ರ ಹನುಮಾನ್ ಕೀ ಜೈ ಎಂಬ ಘೋಷಣೆ ಕೂಗುತ್ತ,ಪುನಹ ಮುನ್ಸಿಪಲ್ ಗ್ರೌಂಡ ಗೆ ಆಗಮಿಸಿದಾಗ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಜೊಲ್ಲೆ ಗ್ರೂಪ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರುಪಾಕ್ಷ ಲಿಂಗ ಸಮಾಧಿ ಮಠದ ಪ್ರಾಣ ಲಿಂಗ ಸ್ವಾಮೀಜಿ ಬಸವ ಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ,ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಶ್ವ ಹಿಂದೂ ಪರಿಷತ ರಾಷ್ಟ್ರೀಯ ವಕ್ತಾರ ಶಂಕರ್ ಗಾಯ್ಕರ್ ಮಾತನಾಡಿ “ಬುದ್ಧ ಬಸವ ಅಂಬೇಡ್ಕರ್ ಛತ್ರಪತಿ ಶಿವಾಜಿ ಸಂಭಾಜಿ ಮಹಾರಾಜರ ರಾಷ್ಟ್ರ ಭಕ್ತಿ ದೇಶ ಭಕ್ತಿ ಕ್ರಾಂತಿಕಾರಿ ಆದರ್ಶಗಳನ್ನು ನೆನಪಿಸಿಕೊಂಡು ಕ್ರಿಯಾಶೀಲರಾಗಬೇಕೆಂದರು. ಸಮಾರಂಭದ ನಂತರ ಶ್ರೀಗಳ ಸಾನಿಧ್ಯದಲ್ಲಿ ಬಸ್ ಪೂಜೆ ಮಾಡುವ ಮುಖಾಂತರ ಆಂಜನೇಯ ಬೆಟ್ಟಕ್ಕೆ 43 ಬಸ್ ಗಳಿಂದ 2200 ಮಾಲಾಧಾರಿಗಳು ತೆರಳಿದವು. ಕೇಸರಿ ಪಂಜೆ ಶ್ವೇತ ಬಣ್ಣದ ಶರ್ಟ್ ಕೈಯಲ್ಲಿ ಕೇಸರಿ ಧ್ವಜ ಕೊರಳಲ್ಲಿ ಹನುಮನ ಮಾಲೆ ಹಾಕಿ ತಾಳ ಮೃದುಂಗ ಭಜನೆ ಕೀರ್ತನೆ ಯೊಂದಿಗೆ ಆಂಜನೇಯ ಬೆಟ್ಟವೇರಿದ ಭಕ್ತರ ಭಕ್ತಿಯ ಪರಾಕಷ್ಟೇ ಕಣ್ತುಂಬಿ ಬಂತು.ಹನುಮ ಮಾಲಾಧಾರಿಗಳಿಗೆ ಜೊಲ್ಲೆ ಗ್ರೂಪ್ ಹಾಗೂ ಮುರುಗೇಶ ನಿರಾಣಿ ಉದ್ಯೋಗ ಸಮೂಹದಿಂದ ಊಟ ವಸತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಹಾಗಾದರೆ ಬನ್ನಿ ಆಂಜನೇಯ ಬೆಟ್ಟದಲ್ಲಿ ಮಾಲಾಧಾರಿಗಳಿಂದ ನಡೆದ ಪೂಜೆ ಕಂಕರ್ಯಗಳನ್ನು ನಾವು ತೋರಿಸ್ತಿವಿ ನೋಡಿ.
ಮಹಾವೀರ ಚಿಂಚಣೆ.