ಕಾಳಗಿ :-ತಾಲೂಕಿನ ಹಿಂದು ಧಾರ್ಮಿಕ ದತ್ತಿ ಇಲಾಖೆಯ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು ಒಟ್ಟು 36.75 ಲಕ್ಷ ರೂ ಸಂಗ್ರಹವಾಗಿದೆ ಎಂದು ಸೇಡಂ ಆಯುಕ್ತ ಕಛೇರಿ ತಹಸೀಲ್ದಾರರಾದ ನಾಗನಾಥ್ ತರಗೇ ಹೇಳಿದರು.
ಪ್ರತಿ ವರ್ಷ ಎರಡು ಬಾರಿ ಹುಂಡಿ ಹಣ ಎಣಿಕೆ ಮಾಡಲಾಗುತ್ತೆ ಮಾರ್ಚ್ ಇಂದ ಇಲ್ಲಿಯವರೆಗೆ 36.75.914 ರೂಪಾಯಿ ನಗದು,50ಗ್ರಾಮ ಬಂಗಾರ,1ಕೆಜಿ 915 ಗ್ರಾಮ ಬೆಳ್ಳಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ರೇವಗ್ಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕ ದೇವಸ್ಥಾನ ಖಾತೆಗೆ ಜಮಾ ಮಾಡಲಾಗಿದೆ
ಬಂಗಾರ ಮತ್ತು ಬೆಳ್ಳಿ ಇಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಳಗಿ ತಾಹಸಿಲ್ದಾರ ಘಮಾವತಿ ರಾಥೋಡ್,ಡೆಪ್ಟಿಕ್ ತಾಹಸಿಲ್ದಾರ್ ಮಾಣಿಕರಾವ ಘತರಗಿ , ಕೊಡ್ಲಿ ಉಪ ತಹಸೀಲ್ದಾರ್ ರವಿಕುಮಾರ್ , ಬಸವರಾಜ ಕಠೋಳ್ಳಿ ಗ್ರಾಮ ಲೆಕ್ಕಧಿಕಾರಿಗಳು, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಗ್ರಾಮ ಲೆಕ್ಕ ಪಾಲಕರು,ಕಂದಾಯ ಇಲಾಖೆ ಸಿಬ್ಬಂದಿಗಳು ಪೊಲೀಸ್ ಸಿಬ್ಬಂದಿಗಳು ಇದ್ದರು.
ವರದಿ : ಹಣಮಂತ ಕುಡಹಳ್ಳಿ