Ad imageAd image
- Advertisement -  - Advertisement -  - Advertisement - 

ಭಾರತೀಯ ಮಜ್ದೂರ್ ಸಂಘದ 70 ನೇ ವಷ೯ದ ಸಂಸ್ಥಾಪನಾ ದಿನಾಚರಣೆ

Bharath Vaibhav
ಭಾರತೀಯ ಮಜ್ದೂರ್ ಸಂಘದ 70 ನೇ ವಷ೯ದ ಸಂಸ್ಥಾಪನಾ ದಿನಾಚರಣೆ
WhatsApp Group Join Now
Telegram Group Join Now

ಹುಬ್ಬಳ್ಳಿ: ಭಾರತೀಯ ಮಜ್ದೂರ್ ಸಂಘ ಧಾರವಾಡ ಜಿಲ್ಲೆ ವತಿಯಿಂದ ಸಂಘದ 70 ನೇ ವಷ೯ದ ಸಂಸ್ಥಾಪನಾ ದಿನಾಚರಣೆಯನ್ನು ಅಮರಗೋಳದ ಅಲ್ಲಂಪಲ್ಲಿ ವೆಂಕಟರಾವ್ ಭವನದಲ್ಲಿ
ಅದ್ದೂರಿಯಾಗಿ ಆಚರಿಸಲಾಯಿತು.

ವಾಯುವ್ಯ ಸಾರಿಗೆ ಮಜ್ದೂರ್ ಸಂಘದ ಅಧ್ಯಕ್ಷ ಹನುಮಂತಪ್ಪ ಇಟಗಿ ಮಾತನಾಡಿ ಸಂಘವು ಮಾಡಿದ ಸಾಧನೆಯ ಬಗ್ಗೆ ಕೊಂಡಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯ ಬಿ ಎಮ್ ಎಸ್ ಸಹಕಾಯ೯ದಶಿ೯ ಸೂರೇಶ ನಾಡಿಗೇರ ಭಾರತೀಯ ಮಜ್ದೂರ ಸಂಘದ ಸಂಸ್ಥಾಪನಾ ದಿನಾಚರಣೆ ಕುರಿತು
ಮಾತನಾಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನರೇಂದ್ರ ಜಾಧವ ಜಿಲ್ಲಾ ಕಾಯ೯ದಶಿ೯ ಬಲಭೀಮ ಪೋದ್ದಾರ ,ನೈರುತ್ಯ ರೈಲ್ವೆ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ
ಸತೀಶ ನಾಯ್ಡು , ಸಂಘದ ಸದಸ್ಯರು, ಲಿಕ್ಕರ್ ಫ್ಯಾಕ್ಟರಿ ಕಾಮಿ೯ಕರ ಮಜ್ದೂರ್ ಸಂಘದ ಅಧ್ಯಕ್ಷ ಅಪ್ಪಾರಾವ್ ಮೊಕಾಶಿ ಹಾಗೂ ಸವ೯ಸದಸ್ಯರು, ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘದ ಸದಸ್ಯರು ಹಾಗೂ ಅನೇಕರು ಭಾಗವಹಿಸಿದ್ದರು
.
ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
Share This Article
error: Content is protected !!