Join The Telegram | Join The WhatsApp |
ಅಥಣಿ : ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಶ್ರೀ ಲಕ್ಷ್ಮಣ ಸವದಿಯವರನ್ನು ಹಾಡಿ ಹೊಗಳುವ ಪ್ಲೇಕ್ಸ್ ಬ್ಯಾನರ್ ಗಳು ಅವರ ಬೆಂಬಲಿಗರಿಂದ ತುಂಬಿ ಹೋಗಿವೆ ತಪ್ಪಿಯೂ ತಮ್ಮದೇ ಪಕ್ಷದ ಸ್ಥಳೀಯ ಶಾಸಕರ ಭಾವಚಿತ್ರ ಹಾಕದೇ ಅವರನ್ನು ಅವಮಾನಿಸುವ ಪ್ರವೃತ್ತಿ ಮುಂದುವರದಿದೆ. ಅವಮಾನಕ್ಕೊಳಗಾಗುತ್ತಿರುವ ಶಾಸಕರು ಮುಖ ಒರೆಸಿಕೊಂಡು ಸುಮ್ಮನಿದ್ದಾರೆ.
ಇದು ಅವರ ಪಕ್ಷದ ಆಂತರಿಕ ವಿಚಾರವಾದರೂ ಜನರಿಂದ ಚುನಾಯಿತರಾದ ಜನಪ್ರತಿನಿಧಿಗೆ ಅವಮಾನಿಸುವ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನವೇ ಸರಿ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ಧಾರ್ಥ ಸಿಂಗೆ ಹೇಳಿದ್ದಾರೆ.
ಅವರು ಭಾರತ ವೈಭವ ದಿನ ಪತ್ರಿಕೆಯೊಂದಿಗೆ ಮಾತನಾಡಿ
ಈಗ 24×7 ಕುಡಿಯುವ ನೀರು ಯೋಜನೆಗೆ 73.50 ಕೋಟಿ ಮಂಜೂರಾತಿ ವಿಷಯದ ಕುರಿತು ಮಾತನಾಡಿದ ಅವರು ಈ ಮೊದಲು 2019ಕ್ಕಿಂತ ಪೂರ್ವದಲ್ಲಿ ಕೃಷ್ಣಾ ನದಿಯಲ್ಲಿ 12 ತಿಂಗಳು ನೀರು ಸಂಗ್ರಹ ಇರುವಂತಹ ಗಣೇಶವಾಡಿ ಹತ್ತಿರ ಕರ್ನಾಟಕದ ಗಡಿಯೊಳಗೆ ಬರುವಂತಹ ನದಿಯಿಂದ ಅಥಣಿ ಪಟ್ಟಣಕ್ಕೆ 24×7 ಕುಡಿಯುವ ನೀರು ಪುರೈಸುವ ಯೋಜನೆಯ ಸರ್ವೆ ಕಾರ್ಯ ಮಾಡಿಸಲಾಗಿತ್ತು.
ಸುಮಾರು 300 ಕೋಟಿ ರೂಪಾಯಿಗಳ ಯೋಜನೆಯ ಈ ಕಾರ್ಯದಿಂದ ಶೇಡಬಾಳ,ಉಗಾರಖುರ್ದ, ಐನಾಪೂರ ಹಾಗೂ ಅಥಣಿ ಪಟ್ಟಣದ ನಾಗರಿಕರು ಖರ್ಚು ಹೆಚ್ಚಾದರೂ 24×7 ಕುಡಿಯುವ ನೀರನ್ನು ಪಡೆಯುವುದು ಸಾಧ್ಯವಿತ್ತು.
ಆದರೆ ಈಗ ಮಂಜೂರಾತಿ ಪಡೆದುಕೊಂಡಿರುವ 73.50 ಕೋಟಿ ರೂಪಾಯಿಗಳ ಯೋಜನೆಯು ಹಲ್ಯಾಳ ಏತನೀರಾವರಿ ಜಾಕ್ ವೆಲ್ ಹತ್ತಿರದಿಂದ ಅಥಣಿ ಪಟ್ಟಣಕ್ಕೆ 24×7 ನೀರು ಪುರೈಸುವದಾಗಿದೆ.
ಆದರೆ 12 ತಿಂಗಳು ಈ ಪ್ರದೇಶದಲ್ಲಿ ನೀರು ಸಂಗ್ರಹ ಸಾಧ್ಯವೇ ? ಅತಿ ವೇಗವಾಗಿ ಬೆಳೆಯುತ್ತಿರುವ ಅಥಣಿ ಪಟ್ಟಣಕ್ಕೆ 24×7 ಈ ಸ್ಥಳದಿಂದ ನೀರು ಪೂರೈಕೆ ಆಗುತ್ತದೆಯೇ ? ಊಹೂಂ ಸಾಧ್ಯವಿಲ್ಲ ಎಂದರು.
ಇದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಮರಳು ಮಾಡುವ 40% ಕಮೀಷನ್ ಯೋಜನೆಯೇ ಹೊರತು ಇದರಲ್ಲಿ ಅಥಣಿಗರಿಗೆ 24×7 ನೀರು ಪೂರೈಕೆ ಸಾಧ್ಯವಿಲ್ಲ ಎಂದರು.
ಈಗಾಗಲೇ ಅಥಣಿಯ ಜನ ನೋಡಿದ್ದಾರೆ ಮತ್ತು ಅನುಭವಿಸಿದ್ದಾರೆ ಹಿಪ್ಪರಗಿ ಬ್ಯಾರೇಜ್ ನಲ್ಲಿ ನೀರು ಸಂಗ್ರಹ ಪ್ರಾರಂಬಿಸಿದ ಬಳಿಕವೂ ಕೂಡ
ಹಲ್ಯಾಳ ನದಿ ಪಾತ್ರದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದನ್ನು,
ಮಹಾರಾಷ್ಟ್ರದಿಂದ ನದಿಗೆ ನೀರು ಬಿಡುವಂತೆ ಆಗ್ರಹಿಸಿ ಕೆಲವು ಸಂಘಟನೆಗಳು ಹೋರಾಟ ಮಾಡಿದ್ದನ್ನು, ಮಹಾರಾಷ್ಟ್ರ ನೀರು ಬಿಡಲು ನಿರಾಕರಿಸಿದ್ದನ್ನು ಕಂಡಿದ್ದಾರೆ.
ಇದೆಲ್ಲವೂ ಗೊತ್ತಿದ್ದು ಬೆಸಿಗೆ ಅಥವಾ ಬರಗಾಲದಲ್ಲಿ ಸಂಪೂರ್ಣ ಬತ್ತಿ ಹೋಗುವ ಸ್ಥಳದಿಂದ 24×7 ನೀರು ಪೂರೈಸುವ ಯೋಜನೆ ಮಂಜೂರಾತಿ ಪಡೆದುಕೊಂಡಿದ್ದೇವೆ ಅಂದರೆ ಇದು ಜನರ ಕಿವಿಗೆ ಹೂವು ಮುಡಿಸುವ ಯೋಜನೆ ಎಂದೆ ಅರ್ಥ.
ಶ್ರೀ ಲಕ್ಷ್ಮಣ ಸವದಿ ಅವರಿಗೆ ನಿಜವಾಗಿಯೂ ಅಥಣಿಗರಿಗೆ 24×7 ನೀರು ಪೂರೈಸುವ ಯೋಜನೆ ಜಾರಿ ಮಾಡಬೇಕು ಎನ್ನುವ ಮನಸ್ಸಿದ್ದರೆ ಈ ಹಿಂದೆ ಸರ್ವೆ ಕಾರ್ಯ ಮಾಡಿದಂತೆ ಕೃಷ್ಣಾ ನದಿಯಲ್ಲಿ *
12 ತಿಂಗಳು ನೀರು ಸಂಗ್ರಹ ಇರುವಂತಹ ಗಣೇಶವಾಡಿ ಹತ್ತಿರ ಕರ್ನಾಟಕದ ಗಡಿಯೊಳಗೆ ಬರುವಂತಹ ನದಿಯಿಂದ ನೀರು ಪೂರೈಸುವ ಯೋಜನೆ ಪ್ರಾರಂಭಿಸಿ.
ಆಗ ಕಟೌಟ್ ಫ್ಲೇಕ್ಸ್ ಬ್ಯಾನರ್ ಕಟ್ಟಿಸಿಕೊಳ್ಳುವಕ್ಕೆ ಒಂದು ಅರ್ಥವಿರುತ್ತದೆ ಇಲ್ಲವಾದಲ್ಲಿ ಇದು ಚುನಾವಣೆಯ ದೃಷ್ಟಿಯಿಂದ ಪ್ರಚಾರ ಪಡೆಯುವ 40% ಕಮಿಷನ್ ಯೋಜನೆಯ ಮಂಜೂರಾತಿ ಎಂದು ತಿಳಿಯಬೇಕಾತ್ತದೆ ಎಂದು
ಸಿದ್ಧಾರ್ಥ ಸಿಂಗೆ
ಅಧ್ಯಕ್ಷರು ಅಥಣಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಇವರು ಪತ್ರಿಕಾ ಪ್ರಕಟಣೆ ನಮ್ಮ ಬಿವಿ ನ್ಯೂಸ್ ವಾಹಿನಿಯ ಮೂಲಕ ತಿಳಿಸಿದ್ದಾರೆ.
ವರದಿ ರಾಜು ಮುಂಡೆ
Join The Telegram | Join The WhatsApp |