Join The Telegram | Join The WhatsApp |
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 17, 2023) ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಜನರಿಂದ ಶುಭಾಶಯಗಳು ಹರಿದುಬರುತ್ತಿವೆ.
ಈ ಸಂದರ್ಭದಲ್ಲಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಮೋ ಅಪ್ಲಿಕೇಶನ್‌ನಲ್ಲಿ ‘ನಿಮ್ಮ ಸೇವಾ ಭಾವವನ್ನು ವ್ಯಕ್ತಪಡಿಸಿ’, ‘ಸೇವಾ ಪಕ್ವಾಡ’ ಉಪಕ್ರಮವನ್ನು ಪ್ರಾರಂಭಿಸಿದೆ.
ಇದು ಜನರು ತಮ್ಮ ಶುಭಾಶಯಗಳನ್ನು ನೇರವಾಗಿ ಪ್ರಧಾನಿ ಮೋದಿಯೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಪ್ರತಿ ವರ್ಷ ಕೋಟಿಗಟ್ಟಲೆ ಭಾರತೀಯರು ಪ್ರಧಾನಿ ಮೋದಿಯವರ ಜನ್ಮದಿನದಂದು ತಮ್ಮ ಶುಭಾಶಯಗಳನ್ನು ಅವರಿಗೆ ಕಳುಹಿಸುತ್ತಾರೆ ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತಾರೆ.
ಈ ವರ್ಷ ಅವರಿಗೆ ಶುಭಾಶಯಗಳನ್ನು ನಮೋ ಆಪ್‌ನಲ್ಲಿ ‘ವೀಡಿಯೋ ಶುಭಕಾಮ್ನಾ’ ಮತ್ತು ‘ಫ್ಯಾಮಿಲಿ ಇ ಕಾರ್ಡ್’ ಎಂದು ಹಂಚಿಕೊಳ್ಳಬಹುದು.
ಪ್ರಧಾನಿ ನರೇಂದ್ರ ಮೋದಿ ಫ್ಯಾಶನ್ ಸೆನ್ಸ್ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ . ಸಾಮಾನ್ಯವಾಗಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿಯನ್ನು ಸಾರುವಂತಹ ಉಡುಪುಗಳನ್ನೇ ಧರಿಸುತ್ತಾರೆ.
ಸಾಂಸ್ಕೃತಿಕ ಉಡುಪುಗಳಿಗೆ ಮಾಡರ್ನ್ ಲುಕ್ ಕೊಟ್ಟು ಧರಿಸುವುದು ಸದ್ಯ ಮೋದಿ ಫ್ಯಾಶನ್ ಸೆನ್ಸ್ ಆಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯ ನಾಯಕ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಾರ್ಯಕ್ರಮಗಳಿಗೂ ಸೂಟ್ ಆಗುವಂತಹ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಳ್ತಾರೆ.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್ರನ್ನು ದೆಹಲಿಯಲ್ಲಿ ಸ್ವಾಗತಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದರು. ತಿಳಿ ಬಣ್ಣದ ನೆಹರೂ ಜಾಕೆಟ್ ಹಾಗೂ ಕಂದು ಬಣ್ಣದ ಶೂ ಈ ಲುಕ್ಗೆ ಇನ್ನಷ್ಟು ಮೆರಗು ನೀಡಿದ್ದು ಸುಳ್ಳಲ್ಲ.
ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಆಕರ್ಷಕ ಉಡುಗೆಗಳನ್ನು ಧರಿಸಿ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಕುರ್ತಾ ಪೈಜಾಮಾ, ಅದಕ್ಕೆ ತಕ್ಕುದಾದ ನೆಹರೂ ಜಾಕೆಟ್ಗಳು, ಕಂದು ಬಣ್ಣದ ಶೂ ಹಾಗೂ ಜಿ 20 ಬ್ಯಾಡ್ಜ್ ಮೂಲಕ ಮೋದಿ ಗಮನ ಸೆಳೆದಿದ್ದರು.
ಆಕಾಶ ಬಣ್ಣದ ಕುರ್ತಾ ಪೈಜಾಮಾದೊಂದಿಗೆ ಮೋದಿ ಧರಿಸಿದ್ದ ಕಡು ನೀಲಿ ಬಣ್ಣದ ನೆಹರೂ ಜಾಕೆಟ್ ಕೂಡ ಮೋದಿಗೆ ಹೇಳಿ ಮಾಡಿಸಿದಂತೆ ಇತ್ತು. ದೀಪಾವಳಿ ಸಂದರ್ಭದಲ್ಲಿ ಕಾರ್ಗಿಲ್ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಧರಿಸಿದ್ದ ಕಾರ್ಗೋ ಟ್ರಾಸರ್ಗಳು ಹಾಗೂ ಜಾಕೆಟ್ , ಇಂಡಿಯನ್ ಆರ್ಮಿ ಕ್ಯಾಪ್ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು.
ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಉಜ್ಜಿಯಿನಿಯಲ್ಲಿರುವ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಧಾನಿ ಮೋದಿ ಬಿಳಿ ಬಣ್ಣದ ಧೋತಿ ಧರಿಸಿ ಗಮನ ಸೆಳೆದಿದ್ದರು.
Join The Telegram | Join The WhatsApp |