Join The Telegram | Join The WhatsApp |
ಅಥಣಿ : ಮಹಾತ್ಮರ ಮತ್ತು ತಪಶ್ವಿಗಳ ಜಯತೋತ್ಸವ ಆಚರಿಸುವದರ ಮೂಲಕ ಭಕ್ತಿ ಪ್ರಾರ್ಥನೆ ಮೂಲಕ ನಮ್ಮ ಮಾನಸಿಕ ನೆಮ್ಮದಿಯನ್ನು ನಾವು ವೃದ್ಧಿಸಿಕೊಳ್ಳಬೇಕು ಎಂದು ಮೊಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿಯವರು ಹೇಳಿದರು.
ಅವರು ಅಥಣಿಯಲ್ಲಿ ಲಿಂಗೈಕ್ಯ ಚನ್ನಬಸವ ಸ್ವಾಮೀಜಿಯವರ 75 ನೇ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಯೋಗಿಗಳು ತಪಶ್ವಿಗಳು ಮಹಾತ್ಮರು ಸದಾ ತಮ್ಮ ಜೀವನವನ್ನು ಸಮಾಜದ ಒಳತಿಗಾಗಿ ಶ್ರಮಿಸಿರುತ್ತಾರೆ. ಅವರ ಪೂಜೆ ಪಾರ್ಥನೆ ತಪಸ್ಸು ಎಲ್ಲವೂ ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಭಾವನೆ ಇರುತ್ತದೆ ನಾವು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅಥಣಿ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿಯವರು ಮಾತನಾಡುತ್ತಾ ಲಿಂಗೈಕ್ಯ ಚನ್ನಬಸವ ಸ್ವಾಮೀಜಿಯವರು ಇಷ್ಟಲಿಂಗ ಪೂಜಾ ನಿಷ್ಠರು ಆಗಿದ್ದರು. ತಮ್ಮ ಅವರ ನಡುವಿನ ಒಡನಾಟವನ್ನು ಸ್ಮರಿಕೊಂಡರು. ಅವರ ಪರಿಶ್ರಮದ ಫಲದಿಂದ ನಾನು ಅಥಣಿ ಶೆಟ್ಟರಮಠದ ಪೀಠಾಧಿಪತಿಯಾದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕಾಡಯ್ಯಾ ಸ್ವಾಮೀಜಿ, ಮಲ್ಲಿಕಾರ್ಜುನ ಗಂಗಾಧರ, ರಾಮಗೌಡ ಪಾಟೀಲ, (ಶಿವನೂರ) ಡಾ.ಪ್ರಿಯವಂದಾ ಹುಲಗಬಾಳಿ ಸಿ.ಎ.ಇಟ್ನಾಳಮಠ ಅವರು ಮಾತನಾಡಿದರು.
ಕಾರ್ಯಕ್ರಮ ಸಂಘಟಿಕರಾದ ವಿಧ್ಯಾ ಹಿರೇಮಠ ಮತ್ತು ಸರ್ಪಭೂಷಣ ಹೀರಮಠ ದಂಪತಿಗಳನ್ನು ಸನ್ಮಾನ ಮಾಡಲಾಯಿತು. ಮಹಿಳಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರಿಗೂ ಸನ್ಮಾನ ಮಾಡಲಾಯಿತು.
ನಿತ್ಯಾನಂದ ಚರಂತಿಮಠ ಸ್ವಾಗತಿಸಿದರು, ಶಿಶಿಕಲಾ ಹರ್ತಿ ವಂದಿಸಿದರು.
ವರದಿ: ಅಬ್ಬಾಸ ಮುಲ್ಲಾ
Join The Telegram | Join The WhatsApp |