Join The Telegram | Join The WhatsApp |
ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ. ಇದೇ ಹೊತ್ತಲ್ಲಿ 96 ವರ್ಷದ ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ.
ಹೌದು ಬ್ರಿಟಿಷರ ಆಳ್ವಿಕೆ, 2ನೇ ಮಹಾಯುದ್ಧ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಗಳಿಗೆ, ಸಂವಿಧಾನ ರಚನೆ, ಹಲವಾರು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭವಾಗಿದೆ.
ಸೋಮವಾರದ ಇಂದು ನಡೆಯುವ ವಿಶೇಷ ಅಧಿವೇಶನದ ಅವಧಿಯಲ್ಲೇ ಸಂಸತ್ತಿನ ಕಾರ್ಯಕಲಾಪ ಹೊಸ ಸಂಸತ್ ಭವನಕ್ಕೆ ಸ್ಥಳಾಂತರವಾಗಲಿದೆ.
ಮಂಗಳವಾರ ಹೊಸ ಸಂಸತ್ತಿಗೆ ಕಲಾಪ ಸ್ಥಳಾಂತರವಾಗಲಿದ್ದು, ಸೆ.19ರಂದು ಗಣೇಶ ಹಬ್ಬದ ಶುಭ ಗಳಿಗೆಯಲ್ಲಿ ಅಲ್ಲಿ ಕಲಾಪ ಆರಂಭವಾಗಲಿದೆ.
ಹೊಸ ಸಂಸತ್ ಭವನಕ್ಕೆ ಕಲಾಪ ಶಿಫ್ಟ್ ಆದ ನಂತ್ರ, ಹಳೆಯ ಸಂಸತ್ ಭವನವನ್ನು ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯಗಳ ಕೇಂದ್ರವನ್ನಾಗಿ ಮಾಡಲಿದೆ. ಈ ಮೂಲಕ ಹಳೆಯ ಸಂಸತ್ ಭವನ ಇತಿಹಾಸ ಪುಟ ಸೇರುವ ಮೂಲಕ, ಇನ್ನೂ ನೆನಪು ಮಾತ್ರವಾಗಿ ಉಳಿಯಲಿದೆ.
Join The Telegram | Join The WhatsApp |