Ad imageAd image

ಹಿಂದಿನ ಕಾಲದಲ್ಲಿ ದೇವತೆಗಳು ಸಾರಾಯಿ ಕುಡಿಯುತ್ತಿದ್ದರು.: ಸಿದ್ದರಾಮಯ್ಯ 

Bharath Vaibhav
ಹಿಂದಿನ ಕಾಲದಲ್ಲಿ ದೇವತೆಗಳು ಸಾರಾಯಿ ಕುಡಿಯುತ್ತಿದ್ದರು.: ಸಿದ್ದರಾಮಯ್ಯ 
siddaramaiah
WhatsApp Group Join Now
Telegram Group Join Now

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಗೂ ಇದೀಗ ನಂದಿನಿ ಉತ್ಪನ್ನಗಳು ಕಾಲಿಟ್ಟಿದ್ದು, ಇಂದು ದೆಹಲಿಯ ಅಶೋಕ್ ಹೋಟೆಲ್ ನಲ್ಲಿ ಸಿಎಂ ಸಿದ್ದರಾಮಯ್ಯ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ದೇವತೆಗಳು ಸಾರಾಯಿ ಕುಡಿಯುತ್ತಿದ್ದರು. ಆದರೆ ನಿಮಗೆ ಸಾರಾಯಿ ಕುಡೀರಿ ಎಂದು ಹೇಳಲ್ಲ. ಹಾಲು ಕುಡಿಯಿರಿ ಹಾಲು ಕಂಪ್ಲೀಟ್ ಫುಡ್ ಎಂದು ತಿಳಿಸಿದರು.

ಇಂದು ದೆಹಲಿಯ ಅಶೋಕ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ನಂದಿನಿ ಉತ್ಪನ್ನಗಳ ಬಿಡುಗಡೆ ಹಾಗೂ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಶು ಸಂಗೋಪನೆ ರೈತರು ಉಪ ಕಸುಬಾಗಿದೆ.

ಗುಜರಾತ್ ನಲ್ಲಿ ಕುರಿಯನ್ ಹಾಲು ಉತ್ಪಾದಕರ ಸಂಘಟನೆ ಮಾಡಿದರು. ಹಾಗಾಗಿ ಇಡೀ ದೇಶಾದ್ಯಂತ ಗುಜರಾತ್ ಪ್ರಥಮ ಸ್ಥಾನದಲ್ಲಿದೆ. ಹೈನುಗಾರಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.

ನಾನು ಪಶು ಸಂಗೋಪನೆ ಇಲಾಖೆಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಅಲ್ಲದೆ ಒಂದು ವರ್ಷ ಕೆಎಂಎಫ್ ಅಧ್ಯಕ್ಷನಾಗಿ ಕೂಡ ಕೆಲಸ ಮಾಡಿದ್ದೇನೆ. ಕರ್ನಾಟಕಕ್ಕೆ ಒಂದು ಕೋಟಿ ಕೆಜಿಯಷ್ಟು ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿದಿನ 31 ಕೋಟಿ ಹಣ ಪಟ್ಟಣದಿಂದ ಹಳ್ಳಿಗೆ ಹೋಗುತ್ತಿದೆ. ರಾಜ್ಯ ಸರ್ಕಾರದಿಂದ 5 ರೂಪಾಯಿ ಹೋಗುತ್ತದೆ ಎಂದು ತಿಳಿಸಿದರು.

ಮಧ್ಯವರ್ತಿಗಳಲ್ಲದೆ ನೇರವಾಗಿ ರೈತರಿಗೆ ಹಣ ಪಾವತಿಯಾಗುತ್ತಿದೆ. ಕಳೆದ ಬಾರಿ ರಾಮನಗರದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಹಾಲು ಕುಡಿಯಿರಿ ಹಾಲು ಕಂಪ್ಲೀಟ್ ಫುಡ್. ದೇವತೆಗಳೇ ಸಾರಾಯಿ ಕುಡಿಯುತ್ತಿದ್ರು. ಹಾಗಂತ ಸಾರಾಯಿ ಕುಡಿಯಿರಿ ಅಂತ ಹೇಳಲ್ಲ. ಜನರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಉಪಯೋಗಿಸಬೇಕು. ಎಂದು ದೆಹಲಿ ಅಶೋಕ್ ಹೋಟೆಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!