ಸೇಡಂ:- ಸತ್ಯ, ಪ್ರಾಮಾಣಿಕತೆ ಮತ್ತು ಸಚ್ಚಾರಿತ್ರ್ಯವಂತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ರಚಿಸಲಾಗಿದ್ದು ಈಗಾಗಲೇ ಸತ್ಯ, ಪ್ರಾಮಾಣಿಕತೆಯ ಜೀವಮಾನ ಸಾಧನೆಗೆ “ಸತ್ಯ ಯುಗಕ್ಕೆ ಅಡಿಗಲ್ಲಿನ ಸಾಧಕ” ಪ್ರಶಸ್ತಿ ನೀಡಲಾಗುತ್ತಿದೆ.
ಅದೇ ರೀತಿ ಸತ್ಯ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಸಮಾಜಕ್ಕೆ ಮಾದರಿಯಾಗುವ ಗಮನಾರ್ಹ ಕೆಲಸ ಮಾಡಿದವರಿಗೆ ಅಯಾ ಸಮಯಕ್ಕೆ ನೀಡಲು “ಸತ್ಯ ಯುಗಕ್ಕೆ ಯೋಗ್ಯ ಸಾಧಕ” ಪ್ರಶಸ್ತಿಯನ್ನು ಟ್ರಸ್ಟ್ ಮೂಲಕ ಸ್ಥಾಪಿಸಲಾಗಿದೆ.
ಈ ಪ್ರಶಸ್ತಿಗೆ ಈಗ ಅಟೋ ಚಾಲಕ ನೀಲಕಂಠ ಕುಕ್ಕುಂದಾ ಅವರನ್ನು ಆಯ್ಕೆ ಮಾಡಲಾಗಿದೆ.
ನೀಲಕಂಠವರು ಇತ್ತೀಚೆಗೆ ತನ್ನ ಆಟೋದಲ್ಲಿ ಪ್ರಯಾಣಿಕ ಮರೆತುಹೋದ ಬಂಗಾರದ ಉಂಗುರವನ್ನು ಪೋಲಿಸ್ ಠಾಣೆಗೆ ನೀಡಿದ್ದರು.
ಇವರ ಸತ್ಯ ಪ್ರಾಮಾಣಿಕತೆ ಸಮಾಜದ ಇತರರಿಗೂ ಸಹ ಸತ್ಯ, ಪ್ರಾಮಾಣಿಕತೆಯ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಲಿ ಎನ್ನುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತಿದೆ.
ಈ ಪ್ರಶಸ್ತಿಯನ್ನು ಟ್ರಸ್ಟ್ ಮೂಲಕ ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಪತ್ರಿಕಾ ಪ್ರಕಟನೆ ಮೂಲಕ ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ
ಕಾರ್ಯದರ್ಶಿಗಳು
ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಸೇಡಂ ರವರು ತಿಳಿಸಿದ್ದಾರೆ.
ವರದಿ ವೆಂಕಟಪ್ಪ ಕೆ ಸುಗ್ಗಾಲ್.