Ad imageAd image

ಭಾರತ ವೈಭವ ಫಲಶೃತಿ; ಕುರಿಗಾಹಿಗರ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು

Bharath Vaibhav
ಭಾರತ ವೈಭವ ಫಲಶೃತಿ; ಕುರಿಗಾಹಿಗರ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು
WhatsApp Group Join Now
Telegram Group Join Now

ಕುರಿಗಾಹಿ ಕುಟುಂಬಗಳ ಸಮಸ್ಯೆಯ ವರದಿಯನ್ನು ಗಮನಿಸಿ ಕೂಡಲೇ ಸ್ಪಂದಿಸಿದ ಪಶು ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು.

ಬೆಳಗಾವಿ :  3 ದಿವಸಗಳ ಹಿಂದಷ್ಟೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ರವರು ಕುರಿಗಾಹಿಕುಟುಂಬಗಳ ಸಮಸ್ಯೆಗಳ ಬಗ್ಗೆ ವರದಿ ತಯಾರಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ಇದಕ್ಕೆ ಕೂಡಲೇ ಎಚ್ಚೆತ್ತುಕೊಂಡ ಬೆಳಗಾವಿ ಜಿಲ್ಲೆಯ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ್ ಕುಲೆರಾ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ್ ರವರು ಸ್ಥಳೀಯ ಅಧಿಕಾರಿಗಳಿಗೆ ಕುರಿಗಾಹಿ ಕುಟುಂಬಗಳಿಗೆ ಸಹಾಯ ಮಾಡಿ ಎಂದು ಹೇಳಿ ಕುರಿಗಾಹಿ ಕುಟುಂಬಗಳ ಪಟ್ಟಿಯನ್ನು ಮಾಡುವಂತೆ ಆದೇಶ ಮಾಡಿದ್ದಾರೆ. ಇದರ ಜೊತೆಗೆ ಅವರ ಆದೇಶದ ಮೇರೆಗೆ ಇಂದು ಕಿತ್ತೂರು ತಾಲ್ಲೂಕು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ವೀರೇಶ್ ಮತ್ತು ತಂಡ ಕುರಿಗಾಹಿ ಕುಟುಂಬಗಳನ್ನು ಭೇಟಿಯಾಗಿ ಅವರಿಗೆ ಅಗತ್ಯವಾದ ಔಷಧಿ ಸಾಮಾಗ್ರಿಗಳನ್ನು ವಿತರಣೆ ಮಾಡಿ ಕುರಿಗಾಹಿ ಕುಟುಂಬಗಳು ಹಾಗೂ ಕುರಿಗಳ ಆರೋಗ್ಯ ಹಿತರಕ್ಷಣೆಗೆ ಸದಾ ಬದ್ಧರಾಗಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಿತ್ತೂರು ಆಹಾರ ನಿರೀಕ್ಷಕರು ಆದ as ಅರಿಶಿನಕರ್ ರವರು ಸಹ ಕುರಿಗಾಹಿ ಕುಟುಂಬಗಳಿಗೆ 1 ಆಹಾರ ಪಡಿತರ ಕಾಳುಗಳನ್ನು ವಿತರಣೆ ಮಾಡಿದರು. ಇದಕ್ಕೆ ಸಂತೋಷಗೊಂಡ ಕುರಿಗಾಹಿ ಕುಟುಂಬಗಳ ಸದಸ್ಯರು ಪಶು ವೈದ್ಯಾಧಿಕಾರಿ ಡಾ.ವೀರೇಶ್ ಮತ್ತು ಈ ವರದಿಯನ್ನು ರಾಜ್ಯ ಮಟ್ಟದಲ್ಲಿ ಗಮನ ಸೆಳೆದು ಪರಿಹಾರ ದೊರಕಿಸಿಕೊಟ್ಟಿದ್ದಕ್ಕೆ ಕಂಬಳಿ ಹೊದಿಸಿ ಕುರಿಯನ್ನು ಸಾಂದರ್ಭಿಕವಾಗಿ ನೀಡಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಒಟ್ಟಾರೆ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರಿಗೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!