ಗದಗ : ಇತ್ತೀಚಿಗೆ ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಎಷ್ಟೇ ಪ್ರಯತ್ನಿಸಿದರು ಕೂಡ ಅವುಗಳ ಕಾಟ ತಪ್ಪಿಲ್ಲ ಇದೀಗ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅಂಬಾಭವಾನಿ ನಗರದಲ್ಲಿ ಈ ಒಂದು ಘಟನೆ ನಡೆದಿದ್ದು, 3 ವರ್ಷದ ಬಾಲಕನ ಮೇಲೆ ಬೀದಿನಾಯಿ ಡೆಡ್ಲಿ ಅಟ್ಯಾಕ್ ಮಾಡಿದೆ. ಬಾಲಕನ ತುಟಿ, ಹಣೇ ಹಾಗೂ ಗಲ್ಲವನ್ನು ಬೀದಿ ನಾಯಿ ಕಚ್ಚಿ ತಿಂದಿದೆ.
ರುದ್ರಪ್ರಿಯ ದೊಡ್ಡಕಾಶಿ (3) ಎನ್ನುವ ಬಾಲಕನಿಗೆ ಗಂಭೀರವಾದ ಗಾಯಗಳಾಗಿವೆ, ಆಟವಾಡುತ್ತಿದ್ದ ಬಾಲಕನ ಮೇಲೆ ದಿಢೀರ್ ಆಗಿ ಬೀದಿನಾಯಿ ಎಗರಿದೆ.
ಸದ್ಯ ಬಾಲಕನಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀಗತನದ ಹೋಳಿಗೆ ಊಟಕ್ಕೆ ಬಾಲಕನ ಕುಟುಂಬಸ್ಥರು ಬಂದಿದ್ದರು.ಈ ವೇಳೆ ಈ ಒಂದು ಘಟನೆ ನಡೆದಿದೆ.