Join The Telegram | Join The WhatsApp |
ಬೆಂಗಳೂರು : ಮನೆಯಲ್ಲಿ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಆಟವಾಡುತ್ತಿದ್ದ ಮಗನಿಗೆ ಪೋಷಕರು ಮೊಬೈಲ್ ಬಿಟ್ಟು ಓದು, ಎಂದು ಹೇಳಿದ್ದಕ್ಕೆ 7ನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೊರವಲಯ ಪ್ರದೇಶ ಅತ್ತಿಬೆಲೆಯಲ್ಲಿ ನಡೆದಿದೆ.
ಇಂದಿನ ಮಕ್ಕಳಿಗೆ ಮೊಬೈಲ್ ಒಂದೇ ಜಗತ್ತು ಆದಂತಾಗಿದೆ. ಇಡೀ ದಿನದ ಚಟುವಟಿಕೆಯನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಇನ್ನು ತಂದೆ ತಾಯಿಗಳಿಗೂ ಕೂಡ ಮಕ್ಕಳು ತಮಗೆ ತೊಂದರೆ ಕೊಡದೇ ಸುಮ್ಮನಿದ್ದರೆ ಸಾಕು ಎನ್ನುವ ನಿಟ್ಟಿನಲ್ಲಿ ಅವರ ಕೈಗೆ ಮೊಬೈಲ್ ಕೊಟ್ಟು ಸುಮ್ಮನಾಗುತ್ತಾರೆ. ಆದರೆ, ಮಕ್ಕಳು ಮೊಬೈಲ್ ಬಳಸುವುದನ್ನೇ ಗೀಳು ಮಾಡಿಕೊಂಡ ನಂತರ ಅವರಿಗೆ ಬುದ್ಧಿ ಹೇಳಲು ಮುಂದಾಗುತ್ತಾರೆ. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ ಎನ್ನುವಂತೆ ಮೊಬೈಲ್ ಬಿಟ್ಟರಲಾರದಷ್ಟು ಗೀಳು ಅಂಟಿಸಿಕೊಂಡ ನಂತರ ಕಠಿಣ ಕ್ರಮ ಕೈಗೊಂಡಾಗ ಅನಾಹುತ ಮಾಡಿಕೊಳ್ಳುತ್ತಾರೆ. ಅಂತಹದ್ದೇ ಘಟನೆ ಬೆಂಗಳೂರಿನ ಹೊರವಲಯ ಅತ್ತಿಬೆಲೆಯಲ್ಲಿ ನಡೆದಿದ್ದು, ಒಬ್ಬನೇ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
Join The Telegram | Join The WhatsApp |