ಗುಳೇದಗುಡ್ಡ:-ಜನರನ್ನು ಆಕರ್ಷಿಸಿದ ವಾದ್ಯಮೇಳಗಳು ,ಅ.೧೬- ಪಟ್ಟಣದ ಕಂಠಿಪೇಟೆಯ ಶ್ರೀ ಬನಶಂಕರಿದೇವಿಗೆ ಸಮರ್ಪಿಸಿದ ರಜತ ಪ್ರಭಾವಳಿಯ ಬೃಹತ್ ಮೆರವಣಿಗೆ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿAದ ಜರುಗಿತು.
ಬೆಳಗಾವಿಯ ಹಲಗಾ ಪಟ್ಟಣದ ಶಿವಶಂಭು ಡೋಲ ತ್ಯಾಶ್ ಧ್ವಜ ಪಥಕ ತಂಡದ ಸುಮಾರು ೮೦ಜನರಿಂದ ಡೋಲು ಬಾರಿಸುವುದು ಜೊತೆಗೆ ಅದೇ ತಂಡದ ಯುವತಿಯರಿಂದ ಡೋಲು ನೃತ್ಯ ಹಾಗೂ ಸೋಮನಕೊಪ್ಪ ಗ್ರಾಮದ ಭೀರಲಿಂಗೇಶ್ವರ ಯುವಕರ ತಂಡದಿAದ ಡೊಳ್ಳು ಕುಣಿತ ಮತ್ತು ನೋಡುಗರನ್ನು ಚಕಿತಗೊಳಿಸುವ ಕೊಣ್ಣೂರಿನ ಗೊಂಬೆಗಳ ಪ್ರದರ್ಶನ ಅಲ್ಲದೇ ಸುಮಾರು ೩೦೦ಕ್ಕೂ ಹೆಚ್ಚು ಮುತ್ತೆದೆಯರು ಕುಂಭ ಹೊತ್ತ ಕಳಸದೊಂದಿಗೆ ಕಂಠಿಪೇಟೆಯ ಶ್ರೀ ಬನಶಂಕರಿ ದೇವಸ್ಥಾನದ ಆವರಣದಿಂದ ಗೊರಲು ಬೃಹತ್ ಮೆರೆವಣಿಗೆಯು ದೇವಾಂಗ ಭಕ್ತರಿಂದ ಹಾದಿ ಪರಮೇಶ್ವರಿ ನಿನ್ನ ಪಾದಕ ಶಂಭೂಕೋ ಎನ್ನುವ ಘೋಷ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಸಾಗಿದರು. ಪುಟಾಣಿ ಮಕ್ಕಳು ಯುವಕರು, ಯುವತಿಯರು, ಹಿರಿಯರು, ಸಡಗರದಿಂದ ಭಿನ್ನ ಭಿನ್ನ ಉಡುಪುಗಳನ್ನು ಧರಿಸಿ ಕಂಗೊಳಿಸಿದ್ದು ಬನಶಂಕರಿದೇವಿಯ ಭಕ್ತಿಗೆ ಅಭೂತಪೂರ್ವ ಸಾಕ್ಷಿಯಾಗಿತ್ತು.
ಶ್ರೀ ಬನಶಂಕರಿ ದೇವಸ್ಥಾನದಿಂದ ಪ್ರಾರಂಭಗೊAಡ ರಜತ ಪ್ರಭಾವಳಿಯ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ನಂತರ ಕಂಠಿಪೇಟೆ ಬನಶಂಕರಿ ದೇವಸ್ಥಾನಕ್ಕೆ ಬಂದು ತಲುಪಿತು. ನಂತರ ಶ್ರೀ ಬನಶಂಕರಿದೇವಿಗೆ ರಜತ ಪ್ರಭಾವಳಿ ಸಮರ್ಪಿದರು.
ಇದಕ್ಕೂ ಮೊದಲು ಶ್ರೀ ವೇದಮೂರ್ತಿ ರಾಘವೇಂದ್ರ ಸ್ವಾಮಿಗಳು ದೇವಾಂಗಮಠ ಇವರಿಂದ ಬೆಳಿಗ್ಗೆ ೬-೦೦ಘÀಂಟೆಗೆ ಶ್ರೀ ಬನಶಂಕರಿದೇವಿಗೆ ಮಹಾಭಿಷೇಕ ಹಾಗೂ ಘಟಸ್ಥಾಪನೆಯು ನೆರವೇರಿತು.
ಶ್ರೀ ೧೦೦೮ ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಗುರುಸಿದ್ದೇಶ್ವರ ಬೃಹನ್ಮಠ ಹಾಗೂ ಶ್ರೀ ಗುರುಬಸವ ದೇವರು, ಮಾಜಿ ಶಾಸಕ ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಕಂಠಿಪೇಟೆ ದೇವಾಂಗ ಸಮಾಜದ ಅಧ್ಯಕ್ಷ ತುಕಾರಾಮ ಬಳಿಗೇರಿ, ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಮುಖಂಡ ವಿಷ್ಣು ಬಳಿಗೇರಿ ಹಿರಿಯರಾದ ರಂಗಪ್ಪ ಶೇಬಿನಕಟ್ಟಿ, ಕೃಷ್ಣಪ್ಪ ಶೇಬಿನಕಟ್ಟಿ, ಈರಪ್ಪ ಶೇಬಿನಕಟ್ಟಿ, ಮಹೇಶ ಶೇಬಿನಕಟ್ಟಿ, ನಾರಾಯಣ ಕಂಠಿಗೌಡ್ರ, ಸೇರಿದಂತೆ ಮತ್ತತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಹಾಲಿಂಗೇಶ ಯಂಡಿಗೇರಿ