ಮೊಳಕಾಲ್ಮೂರು:18 ವರ್ಷ ತುಂಬಿದ ಎಲ್ಲರೂ ಕೂಡ ವಾಹನವನ್ನು ಓಡಿಸಬಹುದು ಆದರೆ ಪರವಾನಿಗೆ ಡಿ ಎಲ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಪಿಎಸ್ಐ ಪಾಂಡುರಂಗಪ್ಪ ತಿಳಿಸಿದರು.
ತಾಲೂಕಿನ ಕೊಂಡ್ಲಹಳ್ಳಿ ಪಿಯುಸಿ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆಯ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡಿ. ಈ ದಿನಗಳಲ್ಲಿ ಮಕ್ಕಳು ತುಂಬಾ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸಬೇಕು. ಮಕ್ಕಳು ವ್ಯಸನಕ್ಕೆ ಬಲಿಯಾಗಬಾರದು. ಉತ್ತಮ ಶಿಕ್ಷಣೆದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೆಲ ಹುಡುಗರು ಮೋಜುಗಾಗಿ ವಾಹನವನ್ನು ಚಲಾಯಿಸಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತವರು ಎಚ್ಚರದಿಂದ ಇರಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
18 ವರ್ಷ ಒಳಗಿನ ಮಕ್ಕಳು ಮದುವೆಯಾಗಬಾರದು ಈ ಭಾಗದ ಜನಗಳಿಗೆ ಕಾನೂನು ಕೊರತೆಯಿಂದ ಮತ್ತು ಶಿಕ್ಷಣದ ಕೊರತೆಯಿಂದ ಬಹುಬೇಗನೆ ಮದುವೆ ಮಾಡುತ್ತಾರೆ ಅಂತವರು ವಿರುದ್ಧ ಪೋಕ್ಸೋ ಕಾಯ್ದೆ ನಾವು ಜಾರಿಗೆ ಮಾಡಿ ಜೈಲಿಗೆ ಕಳಿಸುತ್ತೇವೆ ಎಂದು ಎಚ್ಚರಿಸಿದರು. ಯಾವುದೇ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಕಾನೂನು ವಿರುದ್ಧ ಯಾರೂ ಕೂಡ ಹೋಗಬಾರದು ಎಂದರು.
ಇದೇ ಸಂದರ್ಭದಲ್ಲಿ ಕ್ರೈಂ ಸಬ್ ಇನ್ಸ್ಪೆಕ್ಟರ್ ಈರೇಶ್ ಮಾತನಾಡಿ ಈಗಿನ ವಯಸ್ಕ ಮಕ್ಕಳು ಮೊಬೈಲ್ ವ್ಯಸನಿಗೆ ರಾಗಿರುತ್ತಾರೆ ಮೊಬೈಲ್ಗಳಲ್ಲಿ ಅನೇಕ ತೊಂದರೆಗಳು ಆಗಿರುವ ಉದಾಹರಣೆಗಳು ತುಂಬಾ ಇವೆ ಆದ್ದರಿಂದ ನೀವು ಮೊಬೈಲ್ ವಿಚಾರದಲ್ಲಿ ತುಂಬಾ ಜಾಗೃತರಾಗಬೇಕು ಎಂದರು. ಓದುವ ಮಕ್ಕಳು ಸೋಶಿಯಲ್ ಮೀಡಿಯಾದಿಂದ ತುಂಬಾ ದೂರ ಇರಬೇಕು. ಮಕ್ಕಳು ಉತ್ತಮ ಭವಿಷ್ಯ ರೂಪಿಸಿ ತಂದೆ ತಾಯಿಗಳಿಗೆ ಆಸರೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇನ್ನೂ ಹಲವಾರು ಉಪಸ್ಥಿತರಿದ್ದರು.
ವರದಿ:ಪಿಎಂ ಗಂಗಾಧರ