ಚಿಟಗುಪ್ಪ;- ಪಟ್ಟಣದ ಗಾಂಧಿ ವೃತ್ತದಲ್ಲಿ ಜೈ ಹಿಂದ್ ಗಣೇಶ್ ತರುಣ ಸಂಘದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ 18 ಕೆಜಿ ತೂಕದ ಬೆಳ್ಳಿ ಗಣೇಶ ಮಂಟಪದಲ್ಲಿ ಶುಕ್ರವಾರ ರಾತ್ರಿ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನ ಶ್ರೀ ಮರುಳರಾದ್ಯ ಶಿವಾಚಾರ್ಯರು ವಹಿಸಿ ಮಾತಾಡಿದ್ದು,ಗಣೇಶ ಉತ್ಸವ ಮಾಡುವ ಪ್ರಮುಖ ಉದ್ದೇಶ ಬಗ್ಗೆ ಸ್ಪಷ್ಟವಾಗಿ ಹೇಳಿದರು.ಮುಖ್ಯ ಅತಿಥಿ ಪಿಎಸ್ಐ ಬಾಷುಮಿಯ ಮಾತಾಡಿ,ಗಣೇಶ ಉತ್ಸವ ವ್ಯವಸ್ಥಿತವಾಗಿ ಆಚರಣೆ ಮಾಡಿ ಅದಕ್ಕೆ ಬೇಕಾದ ನಮ್ಮ ಸಹಕಾರ ನೀಡುತ್ತೇವೆ,ಜೊತೆಗೆ ವಾಹನ ಸವಾರರು ಹೆಲ್ಮೆಟ್ ಮತ್ತು ಸಿಟ್ ಬೆಲ್ಟ್ ಕಡ್ಡಾಯವಾಗಿ ಧರಿಸಿ ಎಂದು ಹೇಳಿದರು.
ಇನೊರ್ವ ಅತಿಥಿ ರವಿ ಸ್ವಾಮಿ ನಿರ್ಣಾ ಅವರು ಮಾತಾಡಿ ಪ್ರತಿ ವರ್ಷ ಗಣೇಶ ಉತ್ಸವ ಮಾಡುತ್ತ ಬರುತ್ತಿರುವಿದು ಇನ್ನೊಬ್ಬರಿಗೆ ಮಾದರಿಯಾಗುವ ವಿಷಯವಾಗಿದೆ ಎಂದು ಹೇಳಿದರು.ಪುರಸಭೆ ಸದಸ್ಯರ ನಾಸಿರ್ ಹಕೀಮ್ ಅತಿಥಿ ಸ್ಥಾನ ವಹಿಸಿದ್ದರು.ಬಳಿಕ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರ ನಾಸಿರ್ ಹಕೀಮ್ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಮತ್ತು ಭಕ್ತಾದಿಗಳು ಇದ್ದರು.
ವರದಿ ಸಜೀಶ ಲಂಬುನೋರ್