ವಿಜಯನಗರ : ಜಿಲ್ಲೆ ಕೂಡ್ಲಿಗಿ:ಪಟ್ಟಣದಲ್ಲಿ ಅ28ರಂದು, ತಾಲೂಕಾಡಳಿತ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ. ಮತ್ತು ಸ್ಥಳೀಯ ವಾಲ್ಮೀಕಿ ಸಮುದಾಯ, ಪಟ್ಟಣದ ಸಮಸ್ತ ನಾಗರೀಕರು ಹಾಗೂ ವಿವಿದ ಸಂಘ ಸಂಸ್ಥೆಗಳ ಸಹಯೋಗದಲ್ಲಿ. ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿ ಬಹು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಜರುಗಿತು. ಪಟ್ಟಣದ ಶ್ರೀವಾಲ್ಮೀಕಿ ದೇವಸ್ಥಾನದಲ್ಲಿ, ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು.
ಶ್ರೀವಾಲ್ಮೀಕಿ ಮಹರ್ಷಿಗಳ ಭಾವ ಚಿತ್ರಕ್ಕೆ, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಜಯಂತಿ ಕಾರ್ಯ ಪ್ರಾರಂಭಿಸಲಾಯಿತು. ನಂತರ ಮಹರ್ಷಿಗಳ ಬೃಹತ್ ಭಾವಚಿತ್ರವನ್ನು, ಟ್ರಾಕ್ಟರ್ ನಲ್ಲಿರಿಸಿಕೊಂಡು ವಿವಿದ ವಾಧ್ಯವೃಂಧಗಳೊಂದಿಗೆ ದೇವಸ್ಥಾನದಿಂದ ಮೆರವಣೆಗೆ ಪ್ರಾರಂಭಿಸಲಾಯಿತು. ಮಹರ್ಷಿ ಭಾವಚಿತ್ರ ವಿರುವ ಟ್ರಾಕ್ಟರ್ ಚಲಾಯಿಸುವ ಮೂಲಕ, ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ, ಅಂತಿಮವಾಗಿ ಚಂದ್ರಶೇಖರ ಅಜಾದ್ ರಂಗ ಮಂದಿರದಲ್ಲಿನ ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಎನ್.ಟಿ.ಬೊಮ್ಮಣ್ಣನವರ ವೇದಿಕೆ ತಲುಪಿತು.
ಮೆರವಣಿಗೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ತಂದಿದ್ದರು. ಸಿಂಗಾರಗೊಂಡ ಜೋಡಿ ಎತ್ತುಗಳೊಂದಿಗೆ ರೈತರು ಮೆರವಣಿಗೆಯ ವಾಹನದ ದೊಂದಿಗೆ, ಎತ್ತುಗಳೊಂದಿಗೆ ರೈತರು ಹೆಜ್ಜೆ ಹಾಕಿ ಜಯಂತಿಯಲ್ಲಿ ಭಾಗವಹಸಿದ್ದರು. ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ವಿವಿದ ಭಾಗಗಳಿಂದ ಆಗಮಿಸಿದ್ದ, ನೂರಾರು ಸಮಾಜದ ಭಾಂದವರು ಮೆರವಣಿಗೆಯಲ್ಲಿದ್ದರು.ನಾಗರೀಕರು ವಿವಿದ ಸಮುದಾಯಗಳ ಮುಖಂಡರು, ವಿವಿದ ಸಂಘಟನೆಗಳ ಪದಾಧಿಕಾರಿಗಳು. ತಹಶಿಲ್ದಾರರಾದ ರೇಣುಕಮ್ಮ, ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಮೆಹಬೂಬ್ ಭಾಷ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು. ವಿವಿದ ಗಣ್ಯ ಮಾನ್ಯರು ವಿವಿದ ಪಕ್ಷಗಳ ಮುಖಂಡರು, ವಿವಿದ ಸಮಾಜ ಸೇವಕರು ಹೋರಾಟಗಾರರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ವರದಿ: ವಿ.ಜಿ.ವೃಷಭೇಂದ್ರ