ಮೊಳಕಾಲ್ಮುರು:- ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿದ ನಂತರ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಅಲಂಕೃತಗೊಂಡಿದ್ದ ಟ್ರ್ಯಾಕ್ಟರ್ ನಲ್ಲಿ ಗಣಪತಿ ಕೂರಿಸಲಾಯಿತು,ವಿಸರ್ಜನೆ ಮೆರವಣಿಗೆಗೆ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಕೇಸರಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ಚಾಲನೆಯ ನಂತರ ವಿವಿಧ ಮಂಗಳವಾದ್ಯ ಹಾಗೂ ಜಾನಪದ ಕಲಾ ಪ್ರಕಾರಗಳು, ಸಿಡಿಮದ್ದು, ಬಾಣ ಬಿರುಸುಗಳೊಂದಿಗೆ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳೊಂದಿಗೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ವೈಭವಯುತವಾಗಿ ಮೆರವಣಿಗೆ ನಡೆದು ವಿವಿಧ ಕಲಾ ತಂಡಗಳು ಮೆರವಣಿಗೆಗೆ ರಂಗು ತಂದಿತ್ತು.
ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಈ ಅಪೂರ್ವ ಮೆರವಣಿಗೆಗೆ ಸಾಕ್ಷಿಯಾದರು.
ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಯುವಕರು ಸಖತ್ ಸ್ಟೆಪ್ ಹಾಕಿದರು. ಮೆರವಣಿಗೆ ಆರಂಭವಾದ ಸ್ಥಳದಿಂದ ಗಣೇಶ ಮೂರ್ತಿ ವಿಸರ್ಜನ ಸ್ಥಳದವರೆಗೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು.ಪಟ್ಟಣದ ಪ್ರಮುಖ ಸ್ಥಳಗಳು ಸೇರಿದಂತೆ ಕೆಲವು ಪ್ರಮುಖ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸ್ ಮುನ್ನೆಚ್ಚರಿಕೆ ಕ್ರಮದಿಂದ ಯಾವುದೇ ಅಹಿತರಕರ ಘಟನೆ ನಡೆಯದೆ ಈ ಬಾರಿ ಗಣಪತಿ ವಿಸರ್ಜನೆ ನಡೆಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಒಟ್ಟಿನಲ್ಲಿ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆಯು ಶಾಂತಿಯಾಗಿ ನಡೆಯಿತು..
ಈ ಸಂದರ್ಭದಲ್ಲಿ ಮಹಾಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಅನೇಕ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ಭಾಗವಹಿಸಿದ್ದರು
ವರದಿ ಪಿಎಂ ಗಂಗಾಧರ