Join The Telegram | Join The WhatsApp |
ಬೆಂಗಳೂರು: ರಾಜ್ಯ ಸರ್ಕಾರದಿಂದ ಜೈನ ಸಮುದಾಯಕ್ಕೆ ಭರ್ಜರಿ ಗುಡ್ ನ್ಯೂಸ್ ಎನ್ನುವಂತೆ ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ನೀಡಲು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.
ಈ ಸಂಬಂಧ ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಅದರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧರು ಮತ್ತು ಪಾರ್ಸಿ ಸಮುದಾಯದವರಿಗೆ ವಿವಿಧ ಕಾರ್ಯಕ್ರಮ/ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕಾರ್ಯಕ್ರಮ/ಯೋಜನಗಳಲ್ಲಿ ಜೈನ್ ಫಲಾನುಭವಿಗಳು ಸಹ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಲ್ಲೇಖಿತ ಸುತ್ತೋಲೆಯಲ್ಲಿ ಜೈನ ದಿಗಂಬರ ಹಾಗೂ ಶ್ವೇತಾಂಬರ ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ / ಜಾತಿ ಪುಮಾಣ ಪತ್ರ ನೀಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸುತ್ತಿರುವ ಕಾರ್ಯಕ್ರಮ/ಯೋಜನಗಳ ಪುಯೋಜನ ಪಡೆಯಲು ಜೈನ್ ಸಮುದಾಯದವರು ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ರವರಿಂದ ಪಡೆದು ನೀಡುತ್ತಿದ್ದಾರೆ.
ಆದರೆ ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತರ ಪುಮಾಣ ಪತ್ರ(Minority Certificate) ನೀಡುವ ಕುರಿತು ಉಂಟಾಗುತ್ತಿರುವ ಗೊಂದಲಗಳ ಬಗ್ಗೆ ಸರ್ಕಾರವು ಹಲವಾರು ದೂರುಗಳನ್ನು ಸ್ವೀಕರಿಸುತ್ತಿದೆ.
ಸರ್ಕಾರದ ಅಧಿಸೂಚನ ಸಂಖ್ಯೆ:SWD(MW) 4 LML 2007, DO:17.09.2007 ರಂತ ಜೈನ್ ಸಮುದಾಯವನ್ನು ಸಮುದಾಯ ಎಂದು ರಾಜ್ಯ ಸರ್ಕಾರವು ಪರಿಗಣಿಸಿದ. ಶಾಲಾ ದಾಖಲಾತಿಗಳಲ್ಲಿ ಹಿಂದೂ ಅಲ್ಪಸಂಖ್ಯಾತರ ಎಂದು ನಮೂದಿಸಿರುವುದರಿಂದ, ಅಧಿಕೃತ ದಾಖಲೆಗಳು ಇಲ್ಲದಂತಾಗಿ ಅಲ್ಪಸಂಖ್ಯಾತರ ಪಮಾಣ ಪತ್ರ ಪಡೆಯಲು ತೊಂದರೆ ಉಂಟಾಗುತ್ತಿದೆ.
ಆದ್ದರಿಂದ, ಇನ್ನುಮುಂದೆ ಜೈನ ದಿಗಂಬರ ಹಾಗೂ ಶ್ವೇತಾಂಬರ ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತರ ಪುಮಾಣ ಪತ್ರ ನೀಡುವ ಕುರಿತು ಈ ಕೆಳಕಂಡ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
Join The Telegram | Join The WhatsApp |