Join The Telegram | Join The WhatsApp |
ವರದಿ : ಬಸು ಮಾಳಿ, ರಾಯಬಾಗ
ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿ ಕೋಟ್ಯಾಂತರ ಭಕ್ತರನ್ನು ಬಿಟ್ಟು ಅಗಲಿದ ಜ್ಞಾನಯೋಗಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ ಗಳ ಶ್ರದ್ದಾಂಜಲಿ ಕಾರ್ಯಕರ್ಮವನ್ನು ಕುಡಚಿ ಪಟ್ಟಣದ ಅನುಭವ ಮಂಟಪದಲ್ಲಿ ಸರ್ವಸಮಾಜ ಬಾಂದವರಿಂದ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಬಸವರಾಜ ಸ್ವಾಮಿಗಳು, ಸಿದ್ದಾಪುರದ ಕಾಡಯ್ಯ ಸ್ವಾಮಿಗಳು ಹಾಗೂ ಅಧ್ಯಕ್ಷ ಸ್ಥಾನವನ್ನು ಕುಡಚಿಯ ಮಹಾಲಿಂಗ ಸ್ವಾಮಿಗಳು ವಹಿಸಿದ್ದರು.
ದೀಪ ಬೆಳಗಿಸುವ ಮೂಲಕ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರದಲ್ಲಿ ಎಲ್ಲ ಸ್ವಾಮೀಜಿಗಳಿಂದ ಆಶೀರ್ವಚನ ನಡೆಯಿತು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಮುಖರಾದ ಶಿವಾನಂದ ಲಖ್ಖನಗಾಂವ ಮಾತ ನಾಡಿ ಈ ಕಾರ್ಯಕ್ರಮದಲ್ಲಿ ಎಲ್ಲ ಹಿರಿಯರು ಬಂದು ತಮ್ಮ ಅನುಭವ ಹಂಚಿಕೊಂಡಾರ ಭಾರತ ಜ್ಞಾನರತ್ನವನ್ನು ಕಳೆದ್ಕೊಂಡಿದೆ ಎಂದು ಹೇಳಿದರು. ಸಾಹಿತಿಗಳಾದ ಚೌರಿ ಸರ್ ಅವರು ಕೂಡಾ ಸ್ವಾಮೀಜಿ ದಿವ್ಯ ಮಾನವರಾಗಿದ್ದರು ಎಂದರು.
ಮತ್ತೋರ್ವ ಹಿರಿಯರಾದ ಗಿನಮುಗೆ ಅವರು ಮಾತನಾಡಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಎಲ್ಲರೂ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ ಎಲ್ಲ ಸಮಾಜ ಭಾಂಧವರು ಬಾಗವಹಿಸಿದ್ದರು.
Join The Telegram | Join The WhatsApp |