Ad imageAd image
- Advertisement -  - Advertisement -  - Advertisement - 

ಅಥಣಿಯಲ್ಲಿ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಗಂಡ 

Bharath Vaibhav
ಅಥಣಿಯಲ್ಲಿ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಗಂಡ 
WhatsApp Group Join Now
Telegram Group Join Now

ಬೆಳಗಾವಿ; ಮಕ್ಕಳ ವಿಚಾರವಾಗಿ ಗಂಡ-ಹೆಂಡತಿ ಜಗಳ ಮಾಡಿಕೊಂಡಿದ್ದು, ಇದು ತಾರಕಕ್ಕೇರಿದ್ದರಿಂದ ಗಂಡ, ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅರಟಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಸುನಂದಾ ಎಂಬಾಕೆ ಕೊಲೆಗೀಡಾಗಿದ್ದಾಳೆ.

ಪತಿ ಗೋಪಾಲ ನಾಯಕ ಎಂಬಾತನೇ ಈ ಕೃತ್ಯ ಎಸಗಿರುವಾತ.. ಮಕ್ಕಳ ವಿಚಾರದಲ್ಲಿ ಪತ್ನಿ ಸುನಂದಾ ಜೊತೆ ಪತಿ ಗೋಪಾಲ ಜಗಳ ಮಾಡಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿದೆ.

ಆಗ ಗೋಪಾಲ ಅಲ್ಲಿಯೇ ಇದ್ದ ಕುಡುಗೋಲು ತೆಗೆದುಕೊಂಡು ಪತ್ನಿ ಮೇಲೆ ದಾಳಿ ಮಾಡಿದ್ದಾನೆ.. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಸುನಂದಾ ಸಾವನ್ನಪ್ಪಿದ್ದಾಳೆ..

WhatsApp Group Join Now
Telegram Group Join Now
Share This Article
error: Content is protected !!