ಮೊಳಕಾಲ್ಮೂರು:ನಮ್ಮ ರಾಜ್ಯದಲ್ಲಿ ನೂರಾರು ಕ್ರೀಡಾಪಟುಗಳು ಇದ್ದಾರೆ ಆದರೆ ಅವರಿಗೆ ಸೂಕ್ತ ವೇದಿಕೆ ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಲವು ಕ್ರೀಡಾಪಟುಗಳು ಅವಕಾಶ ವಂಚಿತರಾಗುತ್ತಾರೆ ಎಂದು ಬಿಜೆಪಿ ಮುಖಂಡರಾದ ಪಾಪೆಶ್ ನಾಯಕ್ ತಿಳಿಸಿದರು.
ತಾಲೂಕಿನ ರಾಯಪುರ ಗ್ರಾಮದಲ್ಲಿ ಮೂರನೇ ಬಾರಿಗೆ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ನಮ್ಮ ರಾಜ್ಯದಲ್ಲಿ ಜಿಲ್ಲೆಯಲ್ಲಿ ಅನೇಕ ಕ್ರೀಡಾಪಟುಗಳು ಇರುವುದು ನಿಜ ಅವರಿಗೆ ಸೂಕ್ತ ವೇದಿಕೆ ಇಲ್ಲದೆ ಅನೇಕ ಕ್ರೀಡಾಪಟುಗಳು ಅವಕಾಶ ವಂಚಿತರಾಗುತ್ತಾರೆ ಎಂದು ತಿಳಿಸಿದರು. ಕಬ್ಬಡ್ಡಿ ಪಂದ್ಯಾವಳಿಯು ಈಗ ಎಲ್ಲಾ ಕಡೆ ಪ್ರಚಲಿತವಾಗಿ ಬೆಳೆಯುತ್ತದೆ ಸೋಲು ಗೆಲುವು ಲೆಕ್ಕಿಸದೆ ಕ್ರೀಡೆ ಮನಭಾವದಿಂದ ಪಾಲ್ಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿಪಿ ಸುರೇಶ್ ಮಾತನಾಡಿ ಕಬ್ಬಡಿ ಪಂದ್ಯಾವಳಿಯು ಹಳ್ಳಿಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಕ್ರೀಡೆ ಈ ಕ್ರೀಡೆಯನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಕ್ರೀಡೆಯಿಂದ ದೈಹಿಕವಾಗಿ ನಾವು ಸಬಲರಾಗುತ್ತೇವೆ ಕ್ರೀಡೆಯಿಂದ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಾರ್ವತಮ್ಮ ಬೊಸಯ್ಯ, ಮುಖಂಡರಾದ ಓಬಣ್ಣ ಬೋರಯ್ಯ, ಮಹೇಶ್ ನಾಯಕ್, ನಾಗರಾಜ್, ಪಿಡಿಓ ನೂರಲ್ಲ, ಗ್ರಾಮದ ಮುಖಂಡರು ಕ್ರೀಡಾಪಟುಗಳು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ