ಮುದಗಲ್ಲ : ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಲ್ಲಿ ವಿವಿಧ ವಾಡ೯ಗಳಲ್ಲಿ ಅದ್ದೂರಿ ಗಣೇಶ ವಿಸರ್ಜನೆ ವೇಳೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಿದವು.
ಮುದಗಲ್ಲ ವಿವಿಧ ವಾಡ೯ಗಳಲ್ಲಿ ಹಲವಾರು ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ ಯುವಕರ ಬಳಗವು ಪ್ರತ್ಯೇಕವಾಗಿ ವಿಸರ್ಜನೆ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸುವುದ ರೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.
ಪುರಸಭೆ ಯ ರಂಗಮಂದಿರದಲ್ಲಿ ಪ್ರತಿಷ್ಟಾಪಿಸಿದ ಹಿಂದೂ ಮಹಾ ಗಣಪತಿ ಬಳಗದಿಂದ 3 ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಸಲ್ಲಿಸಲಾಯಿತು ಹಾಗೂ ಶಾದಿ ಮಹಲ್ ,ಬೇಗಂಪೂರ ಪೇಟೆಯ ಗಣೇಶ್ ಗಳನ್ನು ವಿಸರ್ಜನೆ ಮಾಡಿದರು.
ಪ್ರಸಾದ ವಿತರಣೆ, ಭಜನೆ, ವಿದ್ಯುತ್ ಅಲಂಕಾರ, ತಳಿರು ತೋರಣ ಗಳಿಂದ ಅಲಂಕರಿಸಿ ಯುವಕರು ಸಮವಸ್ತ್ರದ ಉಡುಗೆ ತೊಟ್ಟು ಜಾನಪದ, ಸಿನಿಮಾ ಹಾಡುಗಳಿಗೆ ನರ್ತಿಸಿದರು.
ಅಲ್ಲದೇ ನೃತ್ಯ, DJ ಸಾಂಗ್ ಗೆ ಯುವಕರು ಕುಣಿತದ ಮೂಲಕ ಮೆರವಣಿಗೆ ಜರುಗಿತು.
ಮುದಗಲ್ಲ ಪ್ರಮುಖ ರಸ್ತೆ ಗಳ ಮೂಲಕ ವೆಂಕಟರಾಯಪೇಟೆಯ ಬಾವಿ ಯಲ್ಲಿ ವಿಸರ್ಜನೆ ಮಾಡಲಾಯಿತು.
ಇದೇ ವೇಳೆ ಮುದಗಲ್ಲ ಹಿರಿಯರು, ಯುವಕರು ಇದ್ದರು.
ವರದಿ: -ಮಂಜುನಾಥ ಕುಂಬಾರ