Join The Telegram | Join The WhatsApp |
ವೀರಾಪುರ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿಯ ದಂಡೆಯಲ್ಲಿ ಬರುವ ಐತಿಹಾಸಿಕ ಗ್ರಾಮ ವೀರಾಪುರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ನಾಡ ದೇವತೆ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ತಾಯಿಯ ಬಾವಚಿತ್ರವನ್ನು ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಲಾಯಿತು, ಕನ್ನಡ ಹಾಡುಗಳಿಗೆ ಯುವಕರು ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ನೃತ್ಯ ಮಾಡಿದರು, ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು, ರೈತ ಯುವ ಮುಖಂಡ ಮಹಾಂತೇಶ್ ಪೂಜೆರಾ, ಗ್ರಾಮದ ಹಿರಿಯ ಮುಖಂಡ ಶಿವಪ್ಪ ಸಾದುನವರ್, ಹಿರಿಯರಾದ ವಿರಭದ್ರಯ್ಯ ಪೂಜೆರಾ, ಮಂಜು ಬರಗಾವಿ, ಗೋಪಿ ತಳವಾರ, ಪರಶುರಾಮ ತಳವಾರ, ಕಲ್ಮೇಶ್ ಮತ್ತಿಕೊಪ್ಪ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು, ಒಟ್ಟಾರೆ ಐತಿಹಾಸಿಕ ಗ್ರಾಮ ವೀರಾಪುರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
Join The Telegram | Join The WhatsApp |