Join The Telegram | Join The WhatsApp |
ಹುಬ್ಬಳ್ಳಿ: ಕಬ್ಬು ತುಂಬಿದ್ದ ಲಾರಿಯ ಮುಂದೆ ಸಾಗುತ್ತಿರುವ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರನೋರ್ವ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಬೈಕ್ ಸವಾರ ದಾರುಣವಾಗಿ ಸಾವನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಕಳೆದ ದಿನತಡ ರಾತ್ರಿ ನಡೆದಿದೆ.
ಕಲಘಟಗಿ ಪಟ್ಟಣದ ಅರ್ಬನ್ ಬ್ಯಾಂಕ್ ಹತ್ತಿ ದುರ್ಘಟನೆ ಸಂಭವಿಸಿದ್ದು, ಬಸವರಾಜ್ ಕಲೇದ್ (48) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಇನ್ನೂ ಮೃತ ಬಸವರಾಜ್ ಪಟ್ಟಣದ ಅರ್ಬನ್ ಬ್ಯಾಂಕ್ ಮಾರ್ಗವಾಗಿ ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬೈಕ್ ಸ್ಕಿಡ್ ಆಗಿ, ಕೇಳಗೆ ಬಿದಿದ್ದಾರೆ. ಇವರ ಹಿಂದಬದಿಯೇ ಇದ್ದ ಲಾರಿಯು ಚಾಕನ ನಿಯಂತ್ರಣಕ್ಕೆ ಸಿಗದೆ ಬೈಕ್ ಸವಾರನ ಮೇಲೆ ಹರಿದು ಬಸವರಾಜ್ ಸ್ಥಳದಲ್ಲಿಯೇ ಕೊನೆಯುಸಿರೆಳಿದಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |