ನಿಪ್ಪಾಣಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ಚಾಲಕ ಚಾವುಸ್ ಶೌಕತ ಡಾಂಗೆ ವಯಸ್ಸು 42 ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಡಾಂಗೆಯವರನ್ನು ಚಿಕಿತ್ಸೆಗಾಗಿ ಸಾಗಿಸುವಾಗ ದಾರಿಯಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯ ಕುರಿತು ತಿಳಿದ ಅಧಿಕ ಮಾಹಿತಿಯಂತೆ ಯಕ್ಸಂಬಾ ಕಡೆಯಿಂದ ನನದಿ ಸಕ್ಕರೆ ಕಾರಖಾನೆಗೆ ಕಬ್ಬು ಸಾಗಿಸುವ ಟ್ರಾಕ್ಟರ್ ಕೆ.ಎ 48 ಟಿಎ 25 ಹಾಗೂ ಮೃತರಾದ ಚಾವುಸ್ ಚೆನ್ನಮ್ಮ ಸರ್ಕಲ್ ಕಡೆಗೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ದ್ವಿಚಕ್ರ ಚಾಲಕ ಡಾಂಗೆ ಅವರ ಕೈಕಾಲು ಹಾಗೂ ಹೊಟ್ಟೆಗೆ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಸಾಗಿಸುತ್ತಿರುವಾಗ ಮೃತಪಟ್ಟಿದ್ದಾರೆ.ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು ತಡರಾತ್ರಿ ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಘಟನೆ ಸ್ಥಳಕ್ಕೆ ಸದಲಗಾ ಪೊಲೀಸ್ ಠಾಣೆಯ ಎ ಎಸ್ ಐ ಆರ್ ಆರ್ ತಳವಾರ್ ಹಾಗೂ ಸಿಬ್ಬಂದಿ ಆಗಮಿಸಿ ಪಂಚನಾಮಿ ಮಾಡಿದ್ದಾರೆ.ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಮಹಾವೀರ ಚಿಂಚಣೆ