ರಾಮದುರ್ಗ:- ರಾಮಾಪೂರ ಪೇಠದಲ್ಲಿ ಡಾಂಬರ ರಸ್ತೆ ಮತ್ತು ಗಟಾರವನ್ನು ನಿರ್ಮಿಸಿರುವ ವಾರ್ಡ್ ಸಂಖ್ಯೆ 26 ರ ಸಾರ್ವಜನಿಕರು ಹಿಡಿಶಾಪ್.
2023 ನೇ ಸಾಲಿನಲ್ಲಿ ಹೊಸದಾಗಿ ಡಾಂಬರು ರಸ್ತೆ ಹಾಗೂ ಗಟಾರವನ್ನು ನಿರ್ಮಿಸಿದ್ದು, ಕಳಪೆ ಕಾಮಗಾರಿಯಿಂದ ಆ ಗಟಾರದಲ್ಲಿ ಸರಿಯಾದ ರೀತಿಯಲ್ಲಿ ನೀರು ಹರಿದು ಹೋಗದೆ, ಗಟಾರ ತುಂಬಿ ವಾಸಿಸುವ ನೇಕಾರರ ಮನೆಗಳಿಗೆ ಹಾಗೂ ರಸ್ತೆ ಮೇಲೆ ನಿಲ್ಲುತ್ತಿದ್ದು, ರಸ್ತೆಗೆ ಹಾಕಿದ ಡಾಂಬರ ಸಹ ಕೀಳುತ್ತಿದ್ದು,
ಸಾರ್ವಜನಿಕ ಶೌಚಾಲಯದ ಹತ್ತಿರ ಒಳಚರಂಡಿಯ ಡ್ರೈನೇಜ್ ಗೆ ಗಟಾರದ ಕನೆಕ್ಷನ್ ಕೊಟ್ಟಿದ್ದು, ಡ್ರೈನೇಜ್ ಒಳಗೆ ಆರು ಇಂಚಿನ ಸಣ್ಣ ಪೈಪ್ಯಿದ್ದು ನೀರಿನಿಂದ ತುಂಬಿ ನಿಲ್ಲುತ್ತಿದ್ದು, ಮಹಿಳೆಯರಿಗೆ ಶೌಚಾಲಯಕ್ಕೆ ಹೋಗಲು ಸಹ ಸಾಕಷ್ಟು ತೊಂದರೆಯಾಗುತ್ತಿದ್ದು, ಮಳೆಯಾದರೆ ನೀರು ಸಹಿತ ಹರಿದು ಹೋಗಲು ದೊಡ್ಡ ಗಟಾರವು ಸಹ ಇರುವದಿಲ್ಲ.
ಇದರಿಂದ ಮಳೆ ಮತ್ತು ಗಟಾರದ ನೀರು ತುಂಬಿ ವಾಸಿಸುವ ನೇಕಾರರ ಮನೆಗಳಿಗೆ ನುಗ್ಗಿ ಮಗ್ಗಗಳಿಗೆ ಸಹ ತೊಂದರೆ ಉಂಟಾಗುತ್ತಿದೆ. ಈ ವಿಷಯವನ್ನು ಸಾಕಷ್ಟು ಸಲ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪ್ರತ್ಯಕ್ಷವಾಗಿ ಆಗುವ ಸಮಸ್ಯೆಯನ್ನು ಅರಿತ್ತಿದ್ದರೂ ಜಾಣ ಮೌನ ವಹಿಸುತ್ತಿದ್ದಾರೆ.
ಅಲ್ಲದೇ ಸಾಕಷ್ಟು ಸಲ ದೂರವಾಣಿಯ ಮೂಲಕ ಸಂಪರ್ಕಸಿದಾಗ ಸಂಪರ್ಕಕ್ಕೆ ಸಿಗುತ್ತಿಲ್ಲ.ಆದ್ದರಿಂದ ಮಾನ್ಯರಾದ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಕಳಪೆ ಕಾಮಗಾರಿ ಪರಿಶೀಲಿಸಿ ನಮಗೆ ಮಳೆ ನೀರು ಹಾಗೂ ಗಟಾರದ ನೀರು, ಮುಂದೆ ಹರಿದು ಹೋಗುವಂತೆ ಶಾಶ್ವತವಾಗಿ ಪರಿಹಾರವನ್ನು ನೀಡಬೇಕು ಎಂದು ಮನವಿ ನೀಡಿದ್ದಾರೆ.
ಈ ಸಂಧರ್ಭದಲ್ಲಿ
ನಾರಾಯಣ ಬರಡೂರ ತುಕಾರಾಮ ಗದಗಿನ ಸಂಕಪ್ಪ ಪರಸನ್ನವರ ಲಕ್ಷ್ಮವ್ವ ಶಿರೂರ ಲಕ್ಷ್ಮವ್ವ ಖಾನಪೇಠ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕಲಾದಗಿ