ಬೈಲಹೊಂಗಲ :ಪ್ರತಿಯೊಬ್ಬರ ವಿಳಾಸಕ್ಕೆ ಸರಿಯಾಗಿ ಅಂಚೆ ಸೇವೆಯನ್ನು ಒದಗಿಸುವ ಇಲಾಖೆ ಎಂದರೆ ಅದು ಅಂಚೆ ಸೇವೆ ಮಾತ್ರ ಅಂತಹ ಕಚೇರಿಗೆ ವಿಳಾಸ ಇಲ್ಲ ಎಂದರೆ ನಂಬಬಹುದಾ? ಹೌದು ನಂಬಲೇಬೇಕು ಅಂತಹ ಅಂಚೆ ಕಚೇರಿ ಇರುವುದು ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಇಲ್ಲಿಂದ ಅಲ್ಲಿ ಅಲ್ಲಿಂದ ಇಲ್ಲಿ ಕಚೇರಿ ಇಲ್ಲದೆ ತಿರುಗಾಡುತ್ತಿದೆ ನಿರ್ದಿಷ್ಟವಾದ ಕಟ್ಟಡದ ಭಾಗ್ಯ ಸಿಗುತ್ತಿಲ್ಲ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇಲಾಖೆಗೆ ಸರಿಯಾದ ಕಟ್ಟಡ ಒದಗಿಸುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಹಲವಾರು ಬಾರಿ ತಿಳಿಸಿದರು ಪ್ರಯೋಜನವಾಗಿಲ್ಲ ಗ್ರಾಮ ಪಂಚಾಯತ್ ಸದಸ್ಯರಿಗೆ ತಿಳಿಸಿದರು ಕೂಡ ನಿರ್ದಿಷ್ಟ ಕಟ್ಟಡ ದೊರಕಿಲ್ಲ ಕಿವಿ ಕೇಳಿಸದಂತೆ ಕುಳಿತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ ಅಂಚೆ ದಿನ ದಿನಾಚರಣೆಯ ಈ ಸಂದರ್ಭದಲ್ಲಾದರು ಶಾಶ್ವತ ಪರಿಹಾರ ದೊರಕಬೇಕೆಂಬುವುದೇ ಗ್ರಾಮಸ್ಥರ ಆಸೆ
ವರದಿ ದುಂಡಪ್ಪ ಹೂಲಿ