ಸೇಡಂ:- ಸೇಡಂ ತಾಲೂಕಿನ ಮಳಖೇಡ ಕೋಟೆ ವೀಕ್ಷಣೆಗೆ ಆಗಮಿಸಿದ ಪ್ರವಾಸದ್ಯೋಮ ಸಚಿವರಾದ ಎಚ್.ಕೆ.ಪಾಟೀಲ್ ಅವರು ಇಂದಿನ ಪ್ರವಾಸವನ್ನು ಸೇಡಂ ತಾಲೂಕಿನ ಮಳಖೇಡ ಕೋಟೆ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಡಿಎಂಎಸ್ಎಸ್ ಸಂಘಟನೆ ವತಿಯಿಂದ ಮಾದಿಗ ಸಮಾಜದ ಬಹುದೊಡ್ಡ ಬೇಡಿಕೆಯಾದ ರಾಜ್ಯದ ಸರಕಾರದಿಂದ ೧೨ನೇ ಶತಮಾನದ ಮಾದಿಗರ ಕುಲದೇವರಾದ ಶ್ರೀ ಶಿವಶರಣ ಮಾದರ ಚೆನ್ನಯ್ಯನವರ ಜಯಂತಿಯನ್ನು ಆಚರಣೆ ಮಾಡುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಸಚಿವರಾದ ಏಚ್.ಕೆ.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಎಂಎಸ್ಎಸ್ ಸಂಘಟನೆ ತಾಲೂಕ ಅಧ್ಯಕ್ಷರಾದ ಮಾರುತಿ ಮೂಗುಟಿ,ಕೀರ್ತಿಕುಮಾರ್ ಮಳಖೆಡ ಹೋಬಳಿ ಅಧ್ಯಕ್ಷರು, ನರಸಿಂಹ ರಾಜೋಳ್ಳಿ ಗೌರವ ಅಧ್ಯಕ್ಷರು , ಸದಾನಂದ ಹಂದರಿಕಿ ಪ್ರ ಕಾರ್ಯದರ್ಶಿ , ಭೀಮು ಮುಧೋಳ, ಹೋಬಳಿ ಅಧ್ಯಕ್ಷರು, ಭಗವಾನ್ ದೊಡ್ಮನೆ ಪ್ರ. ಸಮಿತಿ ಅಧ್ಯಕ್ಷರು ಸೇಡಂ, ಜಗನ್ನಾಥ ಕುಕುಂದ, ದೇವು ನಟೆಕಾರ್, ಕಾಶೀನಾಥ್ ಸೇಡಂ,ಈ ಸಂದರ್ಭದಲ್ಲಿ ಅನೇಕ ಮುಖಂಡರು ಇದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.