ಕೂಡ್ಲಿಗಿ:- : ಪಟ್ಟಣದ ಆಜಾದ್ ನಗರ ವಾಸಿ, ಮಾಬುಬ್ಬಿ ಎನ್ನುವರ ಸೈಟ್ ನಲ್ಲಿ ಬೀದಿ ನಾಯಿಗಳ ದಾಳಿಗೆ ಕುರಿ ಬಲಿಯಾಗಿರುವ ಘಟನೆ ಅ2ರಂದು ತಡರಾತ್ರಿ ಜರುಗಿದೆ. ಪಟ್ಟಣದ 4ನೇ ವಾರ್ಡ್ ನಲ್ಲಿ ಮಾಬುಬಿ ಎಂಬುವರು ತಮ್ಮ ಮನೆಯಂಗದಲ್ಲಿ ಕಟ್ಟಿದ್ದ , 15ಸಾವಿರ ರೂ ಬೆಲೆಯ ಕುರಿಯನ್ನು ಬೀದಿನಾಯಿಗಳು ತಿಂದಿವೆ. ಪಟ್ಟಣದ ಕೆಲ ಗಲ್ಲಿಗಳಲ್ಲಿ ಮನೆಯಂಗಳದಲ್ಲಿ ಕಟ್ಟಿರುವ ಕುರಿ ಮೇಕೆ ಹಾಗೂ ಎಮ್ಮೆ ಆಕಳು ದನಗಳ ಮೇಲೆ, ಬೀದಿ ನಾಯಿಗಳು ದಾಳಿ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಬೆಳಕಿಗೆ ಬರೋದು ತುಂಬಾ ವಿರಳ, ಇಂತಹ ಅಸಂಖ್ಯಾತ ದನಗಳ ಮೇಲೆ ಸಾಕು ಪ್ರಾಣಿಗಳ ಮೇಲೆ ಬೀದಿ ನಾಯಿಗಳ ದಾಳಿ ಪ್ರಕರಣಗಳು ಜರುಗಿವೆ. ಪಟ್ಟಣ ಪಂಚಾಯ್ತಿ ಜನ ಪ್ರತಿನಿಧಿಗಳು ಹಾಗೂ ಪಪಂ ಅಧಿಕಾರಿಗಳು ಮಾತ್ರ, ಇದಕ್ಕೂ ತಮಗೂ ಏನೂ ಸಂಬಂಧ ಇಲ್ಲ ಎನ್ನೋರೀತಿಯಲ್ಲಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ, ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಗಮನಕ್ಕೆ ವರದಿಗಳ ಮೂಲಕ ತರಲಾಗಿದೆ. ಆದರೂ ಕೂಡ ಪಪಂ ಎಚ್ಚೆತ್ತುಕೊಂಡಿಲ್ಲ, ಬೀದಿ ನಾಯಿಗಳು ಗಲ್ಲಿ ಗಲ್ಲಿ ಗಳಲ್ಲಿ, ಎತೇಚ್ಚಾಗಿದ್ದು ಮಕ್ಕಳು ಸಂಚರಿಸುವುದು ಅಸಾಧ್ಯವಾಗಿದೆ. ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿರುವ ಘಟನೆಗಳು ಜರುಗಿವೆ, ಘಟನೆಗಳು ಸಾರ್ವಜನಿಕ ವಲಯದಲ್ಲಿ ಇನ್ನೂ ಮಾಸಿಲ್ಲ. ಆಗಲೇ ಅನೇಕ ಇಂತಹ ಘಟನೆಗಳು ಸಾಕಷ್ಟು ಜರುಗಿವೆ, ಪಪಂ ಎಚ್ಚೆತ್ತುಕೊಂಡಿಲ್ಲ ನಿದ್ರೆಗೆ ಜಾರಿದೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ. ವಿ.ಜಿ.ವೃಷಭೇಂದ್ರ