Join The Telegram | Join The WhatsApp |
ಹುಕ್ಕೇರಿ:ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಸಮೀಪ ಒಂದು ಬೈಕ್ ಹಾಗೂ ಮೂರು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ತಾಯಿ, ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೈಲಹೊಂಗಲ ತಾಲ್ಲೂಕಿನ ಮಲ್ಲಾಪುರ ನಿವಾಸಿ ಭಾರತಿ ಅನಿಲ್ ಪೂಜೇರಿ (28), ವೇದಾಂತ ಅನಿಲ್ ಪೂಜೇರಿ (6) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮೃತಪಟ್ಟ ಭಾರತಿ ಅವರ ಪತಿ, ಅನಿಲ್ ಶಂಕರಯ್ಯ ಪೂಜೇರಿ (35), ಗೋಕಾಕ ತಾಲ್ಲೂಕಿನ ಮರಡಿಮಠ ಗ್ರಾಮದ ನಿವಾಸಿ ಕಿರಣ ಲೋಕಯ್ಯ ಸಾಲಿಮಠ (28) ಎಂಬುವವರು ಗಾಯಗೊಂಡಿದ್ದಾರೆ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತದ ರಭಸಕ್ಕೆ ಮೂರು ಕಾರುಗಳು
ನಜ್ಜುಗುಜ್ಜಾಗಿವೆ. ಬೈಕ್ ಎರಡು ತುಂಡಾಗಿದೆ. ಸ್ಥಳಕ್ಕೆ ಪೋಲಿಸ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫಿಕ್ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿವಿ ನ್ಯೂಸ್ ಹಾಗೂ ಭಾರತ ವೈಭವ ದಿನಪತ್ರಿಕೆ ವರದಿಗಾರರು
ಶಿವಾಜಿ ಎನ್ ಬಾಲೇಶಗೋಳ
Join The Telegram | Join The WhatsApp |