ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ನಿಧಿ ಪತ್ತೆಯಾಗಿದೆ.
ದೇವಸ್ಥಾನ ಆವರಣದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮಡಕೆಯಲ್ಲಿ ಚಿನ್ನದ ನಗನಾಣ್ಯ ಪತ್ತೆಯಾಗಿವೆ.
ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿತೋಟದಲ್ಲಿ ಪುರಾತನ ಈಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಭೂಮಿಯಡಿಯಲ್ಲಿ ಮಣ್ಣಿ ಮಡಕೆ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿವೆ.