Ad imageAd image

ದಪ್ಪಗಿರುವ ಹುಡುಗಿ ಮದುವೆಯಾಗಲು ಸಿಗ್ತಿಲ್ಲವೆಂದು ಯುವಕ ಆತ್ಮಹತ್ಯೆ

Bharath Vaibhav
ದಪ್ಪಗಿರುವ ಹುಡುಗಿ ಮದುವೆಯಾಗಲು ಸಿಗ್ತಿಲ್ಲವೆಂದು ಯುವಕ ಆತ್ಮಹತ್ಯೆ
WhatsApp Group Join Now
Telegram Group Join Now

ಬೆಂಗಳೂರು: ತಾನು ದಪ್ಪಗಿದ್ದು, ತನ್ನದೇ ದೇಹವನ್ನು ಹೋಲುವಂತ ದಪ್ಪಗಿನ ಹುಡುಗಿ ಮದುವೆಯಾಗಲು ಸಿಗುತ್ತಿಲ್ಲ ಎಂಬುದಾಗಿ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ನಡೆದಿದೆ.

ಬೆಂಗಳೂರಿನ ಉತ್ತರ ತಾಲ್ಲೂಕಿನ ನಾರಯಣಪ್ಪನಪಾಳ್ಯದಲ್ಲಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಂತೆ ವೆಂಕಟೇಶ್(29) ಎಂಬಾತನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಯುವಕನಾಗಿದ್ದಾನೆ.
ಗೋವಿಂದರಾಜು ಹಾಗೂ ಮಂಗಳಮ್ಮ ಎಂಬುವರ ಪುತ್ರ ವೆಂಕಟೇಶ್ ಆಗಿದ್ದಾರೆ.

ಮದುವೆಯಾಗೋದಕ್ಕಾಗಿ ಹುಡುಗಿಯನ್ನು ಹುಡುಕುತ್ತಿದ್ದನು. ಸುಮಾರು 15 ಹುಡುಗಿಯರನ್ನು ನೋಡಿದ್ದರೂ ವೆಂಕಟೇಶ್ ದಪ್ಪ ಇದ್ದಾನೆ ಅಂತ ಹುಡುಗಿ ಹಾಗೂ ಪೋಷಕರು ಮದುವೆ ನಿರಾಕರಿಸಿದ್ದರು. ತನ್ನಷ್ಟೇ ದಪ್ಪಗಿರುವಂತ ಹುಡುಗಿ ಸಿಗುತ್ತಿಲ್ಲ ಎಂಬುದಾಗಿ ಮನನೊಂದಂತ ಆಟೋ ಚಾಲಕ ವೆಂಕಟೇಶ್ನೇ ಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವೆಂಕಟೇಶ್ ಚಿಕ್ಕಮ್ಮ ಫೋನ್ ಮಾಡಿದರೂ ಫೋನ್ ಪಿಕ್ ಮಾಡದೇ ಇದ್ದಾಗ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!