Join The Telegram | Join The WhatsApp |
ಬೆಳಗಾವಿ: ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ತಾಲೂಕಿನ ಹುಲಿಯಾಳ ಗ್ರಾಮದಲ್ಲಿ ಆಗಸ್ಟ್ ೯ ರಂದು ನಡೆದಿದ್ದ ಚಾಕು ಇರಿತ ಪ್ರಕರಣ ಇದಾಗಿದ್ದು, ಅಭಿಷೇಕ್ ಬುಡ್ರಿ (19) ಕೊಲೆಯಾದ ಯುವಕನಾಗಿದ್ದಾನೆ.ಹುಲ್ಲೆಪ್ಪಾ ಕರೀಕಟ್ಟಿ ಎಂಬವನ ಪತ್ನಿ ಮೇಲೆ ಅಭಿಷೇಕ್ ಬುಡ್ರಿ ಕಣ್ಣು ಹಾಕಿದ್ದನು.
ವಿಚಾರ ತಿಳಿದ ಹುಲ್ಲೆಪ್ಪಾ, ಆಗಸ್ಟ್ 9 ರಂದು ರಾತ್ರಿ ಬರ್ತ್ ಡೇ ಪಾರ್ಟಿ ಇದೆ ಅಂತಾ ಅಭಿಷೇಕ್‌ನನ್ನು ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದು,ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್‌ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಲವು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಭಿಷೇಕ್ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಘಟನೆ ಸಂಬ0ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹುಲ್ಲೆಪ್ಪಾನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.
Join The Telegram | Join The WhatsApp |