Join The Telegram | Join The WhatsApp |
ಯರಗಟ್ಟಿ: ಸಮೀಪದ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕುರಿ ಕಳ್ಳತನ ಪ್ರಕರಣ ವರದಿಯಾಗಿದ್ದು ಹಲಕಿ ಕ್ರಾಸ ಹತ್ತಿರ 30 ಕುರಿಗಳು ಕಳ್ಳತನವಾದ ಕುರಿತು ಈ ಬಗ್ಗೆ ಮುರಗೋಡ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಬೇದಿಸಿ ಅಶೋಕ ಬಸಪ್ಪ ಮಾಡಮಗೇರಿ ಎಂಬ ಆರೋಪಿಯನ್ನು ಬಂದಿಸಿ ಅವನಿಂದ ಕುರಿ ಕಳ್ಳತನಕ್ಕೆ ಸಂಬಂದ 1,00,000/- (ಒಂದು ಲಕ್ಷ ) ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಅಶೋಕಾ ಲೇಲ್ಯಾಂಡ ಗೂಡ್ಡ ಗಾಡಿಯನ್ನು ಅಂದಾಜು ಕಿಮ್ಮತ್ತಿನ 2,15,000/ – ರೂ ವಶಪಡಿಸಿಕೊಂಡು ಒಟ್ಟು 3,15,000/- ರೂಪಾಯಿ ಕಿಮ್ಮತ್ತಿ ಮಾಲನ್ನು ವಶಪಡಿಸಿಕೊಂಡಿದ್ದು.
ಕೃತ್ಯದಲ್ಲಿ ಭಾಗಿಯಾಗಿದ್ದ ಇತರರು ತಲೆ ಮರೆಸಿಕೊಂಡಿದ್ದು ಈ ಬಗ್ಗೆ ತಪಾಸಣೆ ಜಾರಿಯಲ್ಲಿ ಇದೆ.
ಈ ಕಾರ್ಯಾಚರಣೆಯಲ್ಲಿ ಡಿ.ಎಸ್.ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಮುರಗೋಡ ಸಿ.ಪಿ.ಐ. ಮೌನೆಶ್ವರ ಮಾಲಿಪಾಟೀಲ, ಪ್ರೋಬೆಶನರಿ ಪಿ ಎಸ್ ಐ ಬಸನಗೌಡ ರ್ನಿಲಿ, ಕುಮಾರಿ ಲಕ್ಷ್ಮೀ ಬಿರಾದಾರ ಸಿಬ್ಬಂದಿಯರಾದ ವೈ ಎಚ್ ಕಡಕೋಳ, ಎಚ್ ಆರ್ ನ್ಯಾಮಗೌಡ್ರ, ಕೆ ಬಿ ಅಲಗರಾವುತ, ಎಮ್ ಬಿ ಸಣ್ಣನಾಯ್ಕರ, ಎಮ್. ಎಸ್. ಅವರಾದಿ, ಐ ಎಸ್ ವಕ್ಕುಂದ, ವಿ. ಡಿ. ಸಕ್ರಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ತಂಡದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲಅವರು ಕಾರ್ಯ ವೈಖರಿ ಬಗ್ಗೆ ಪ್ರಶಂಸಿಸಿದ್ದಾರೆ.
ವರದಿ : ಈರಣ್ಣಾ ಹುಲ್ಲೂರ
Join The Telegram | Join The WhatsApp |