ಬೆಂಗಳೂರು : ನಟಿ ಸಾನ್ಯಾ ಅಯ್ಯರ್ ಇಂದು ತಮ್ಮ 26ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ’ ಮದುವೆ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸಾನ್ಯಾ ಅಯ್ಯರ್ ಬಾಲ ಕಲಾವಿದೆಯಾಗಿ ಎಲ್ಲರ ಗಮನ ಸೆಳೆದರು.ಸುಮಾರು ವರ್ಷಗಳ ಬಳಿಕ 2022 ರಲ್ಲಿ ಬಿಗ್ ಬಾಸ್ 9ರ ಸ್ಪರ್ಧಿಯಾಗಿ ಭಾಗವಹಿಸಿದರು.
ಸಾನ್ಯ ಅಯ್ಯರ್ ಇದೇ ವರ್ಷದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಜೊತೆ ‘ಗೌರಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದು, ಆಗಸ್ಟ್ 15 ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಇವರು ಇತ್ತೀಚೆಗೆ ತಮ್ಮ ಬೋಲ್ಡ್ ಅವತಾರಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.
ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿಮಾ ಕಲಾವಿದರು ಸಿನಿ ತಾರೆಯರು ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ