Join The Telegram | Join The WhatsApp |
ಮುಂಬೈ : ವಿಶ್ವದ ಶ್ರೀಮಂತರ ಪಟ್ಟಿಯ ಸ್ಥಾನದಲ್ಲಿ ಭಾರತದ ಅತಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಸ್ಥಾನ ಕೆಳಗಿಳಿದಿದೆ.
ಬಿಲಿಯನೇರ್ ಗೌತಮ್ ಅದಾನಿ ಇಲ್ಲಿವರೆಗೆ ಇದ್ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಮೂರನೇ ಸ್ಥಾನದಿಂದ ಕೆಳಕ್ಕೆ ಕುಸಿದಿದ್ದಾರೆ.ಅವರ ಸ್ಥಾನಕ್ಕೆ ಜೆಫ್ ಬೆಜೋಸ್ ಏರಿದ್ದು, ಗೌತಮ್ ಅದಾನಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿರುವ ಗೌತಮ್ ಅದಾನಿ ಆದಾಯ 120 ಬಿಲಿಯನ್ ಡಾಲರ್. ಮತ್ತೊಂದೆಡೆ ಅದಾನಿ ಕಳೆದ 24 ಗಂಟೆಗಳಲ್ಲಿ $872 ಮಿಲಿಯನ್ ನಷ್ಟು ನಿವ್ವಳ ಮೌಲ್ಯದ ಕುಸಿತವನ್ನು ಕಂಡಿದ್ದಾರೆ ಮತ್ತು ಜನವರಿ 24, 2022 ರಿಂದ ಅವರು $683 ಮಿಲಿಯನ್ ಕಳೆದುಕೊಂಡಿದ್ದಾರೆ.
ಕಳೆದ ಪಟ್ಟಿಯಲ್ಲಿದ್ದಂತೆ ಬರ್ನಾರ್ಡ್ ಅರ್ನಾಲ್ಟ್ ಮತ್ತು ಎಲೋನ್ ಮಸ್ಕ್ ರ ಅಗ್ರ ಸ್ಥಾನಗಳು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಬದಲಾಗದೆ ಉಳಿದಿವೆ. ಅವರಿಬ್ಬರೂ ಕ್ರಮವಾಗಿ ಮೊದಲ ಮತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಈಗ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಕೇಶ್ ಅಂಬಾನಿ ಕೂಡ ಕಳೆದ ಬಾರಿಗಿಂತ ಒಂದು ಸ್ಥಾನ ಕೆಳಗೆ ಕುಸಿದಿದ್ದು ಸದ್ಯ 12 ನೇ ಸ್ಥಾನದಲ್ಲಿದ್ದಾರೆ.
Join The Telegram | Join The WhatsApp |