Join The Telegram | Join The WhatsApp |
ಧಾರವಾಡ: ಹಿರಿಯ ದೊಡ್ಡಾಟ ಕಲಾವಿದರಾದ ಆಡಿವಯ್ಯ ಚ ಹಿರೇಮಠ ರವರ ದೊಡ್ಡಾಟ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2022 ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇದು ಕಲಘಟಗಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಅವರು ತಮ್ಮ 13 ನೇ ವಯಸ್ಸಿನಿಂದಲೇ ದೊಡ್ಡಾಟ ಕಲೆಯಿಂದ ಆಕರ್ಷಣೆಯಾಗಿ ಅಪಾರ ಸಾಧನೆ ಮಾಡಿದ್ದಾರೆ,250ರಿಂದ 300 ದೊಡ್ಡಾಟಗಳಿಗೆ ಸ್ವತಃ ಕಥೆಗಾರರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ಗ್ರಾಮೀಣ ಕಲೆಯನ್ನು ಉಳಿಸುವಲ್ಲಿ ಅಪಾರ ಪಾತ್ರ ವಹಿಸಿದ್ದಾರೆ.
ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ದೊಡ್ದಾಟ ಕಲಾವಿದ ಆಡವಯ್ಯ ಹಿರೇಮಠ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿರುವದಕ್ಕೆ ಕಲಘಟಗಿ ಜನತೆ ಹಾಗೂ, ಕಲಘಟಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |